ಕಲಘಟಗಿ: ಪಟ್ಟಣದಲ್ಲಿ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮಾಜಿ ಸಚಿವ ಸಂತೋಷ ಲಾಡ್ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಈಗಾಗಲೇ ರಾಷ್ಟ್ರ ಧ್ವಜವನ್ನು ತಯಾರಿ ಮಾಡಲಾಗಿದ್ದು, ಅದನ್ನು ವಾಹನದಲ್ಲಿ ಸರಿಯಾಗಿ ಹೊಂದಿಸುವ ಕಾರ್ಯ ನಡೆದಿದೆ.
ಅದೇ ರೀತಿ ಕಲಘಟಗಿ ಪಟ್ಟಣ ಎಪಿಎಂಸಿಯಲ್ಲಿ ಸೇರುವ ಜನಸಾಗರಕ್ಕೆ ಊಟದ ವ್ಯವಸ್ಥೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು, ಕಾರ್ಯಕ್ರಮಕ್ಕೆ ವೇದಿಕೆ ಕೂಡ ತಯಾರಿ ನಡೆಸುತ್ತಿದ್ದಾರೆ. ನಾಳೆ ನಡೆಯುವ ರಾಷ್ಟ್ರ ಧ್ವಜದ ಮೆರವಣಿಗೆಗೆ ಕಲಘಟಗಿ ಪಟ್ಟಣನಲ್ಲಿ ಬ್ಯಾನರ್‌ಗಳು ಕಂಗೊಳಿಸುತ್ತಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/08/2022 08:48 pm