ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇಶ ಸೇವೆ ಸಂಕಲ್ಪದೊಂದಿಗೆ ಅದ್ಧೂರಿಯಾಗಿ ಜರುಗಿದ ಎಸ್‌ಎಸ್‌ಕೆ ಸಮಾಜ ರಾಜ್ಯ ಸಮಾವೇಶ

ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜದ ಯುವಕರ ಭವಿಷ್ಯ ನಿರ್ಮಾಣ ಮಾಡುವುದು, ಶಿಕ್ಷಣದಲ್ಲಿ ಯುವಕ ಯುವತಿಯರ ಪಾತ್ರ ಹೇಗಿರಬೇಕು. ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡುವುದು, ರಾಜಕೀಯದಲ್ಲಿ ಸ್ಥಾನಮಾನ, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುದು, ಬಲಿಷ್ಠ ಯುವ ಸಂಘಟನೆ ರೂಪಿಸುವುದು ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಗಳನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ಶನಿವಾರ ನಗರದ ಕ್ಯೂಬಿಕ್ಸ್ ಹೊಟೇಲ್ ಎಸ್‌ಎಸ್‌ಕೆ ಸಮಾಜದ ಬೃಹತ್ ಸಮಾವೇಶ ಜರುಗಿತು.

ರಾಯಚೂರು, ಕೊಪ್ಪಳ, ಗದಗ, ಕಾರವಾರ, ಬೆಳಗಾವಿ ಬಾಗಲಕೋಟ ವಿಜಯಪುರ ಬೆಂಗಳೂರು ಮೈಸೂರು ಕೊಪ್ಪಳ ದಾವಣಗೆರೆ ಹರಿಹರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 700 ಕ್ಕೂ ಹೆಚ್ಚು ಸಮಾಜ ದ ಯುವ ಪ್ರತಿನಿಧಿಗಳು ಬಾಂಧವರು ಭಾಗವಹಿಸಿದ್ದು ವಿಶೇಷವಾಗಿತ್ತು.

ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡ ಗಣ್ಯಾತೀಗಣ್ಯರು ಸಮಾಜದ ಸಮಗ್ರ ಏಳಿಗೆ ಹಾಗೂ ಮುಂದೆ ಹೊಂದ ಬೇಕಾದ ಗುರಿಗಳ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದಿಂದ ದೇಶಕ್ಕೆ ಸಲ್ಲಿಸಬಹುದಾದ ಸೇವೆ ಬಗ್ಗೆ ಮಾರ್ಗದರ್ಶನ ಮಾಡಿದ್ದು, ಅವರ ದೇಶಪ್ರೇಮದ ಪ್ರತೀಕವಾಗಿತ್ತು.

ಸಮಾವೇಶದಲ್ಲಿ ಎಸ್‌ಎಸ್‌ಕೆ ಸಮಾಜದ ಹುಬ್ಬಳ್ಳಿ ಧಾರವಾಡ ಪಾಲಿಕೆ ಸದಸ್ಯರು ಪುರಸಭೆ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಗೌರವ ಡಾಕ್ಟರೇಟ್ ಪಡೆದ ಡಾ. ಶಶಿಕುಮಾರ್ ಮೆಹರವಾಡೆ, ಡಾ. ನೀಲಕಂಠಸಾ ಜಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಷ್ಟೇ ಅಲ್ಲದೆ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದ ರಾಜ್ಯ ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷರಾದ ಅಶೋಕ ಕಾಟವೆ ಅವರನ್ನು ಸನ್ಮಾನಿಸಲಾಯಿತು. ಸಮಾವೇಶ ಅಚ್ಚುಕಟ್ಟಾಗಿ ನಡೆಯಲು ಕಾರಣಿಭೂತರಾದ ಗೋಪಾಲ ಬದ್ದಿ ಅವರ ಕಾರ್ಯವನ್ನು ಪ್ರಶಂಸಿಸಲಾಯಿತು. ಸಮಾವೇಶಕ್ಕೆ ಬಂದಂತಹ ಅತಿಥಿಗಳನ್ನು ಸೊಮಂಗಳೆಯರು ತಿಲಕ ಹಚ್ಚಿ ಶಾಲಾರ್ಪಣೆ ಮಾಡಿ ಸ್ವಾಗತ ಕೋರಲಾಯಿತು. ಈ ಕಾರ್ಯಕ್ರಮ ವು ರಾಷ್ಟ್ರ ಗೀತೆ ಇಂದ ಪ್ರಾರಂಭಿಸಿ ನಂತರ ಸಮಾಜದಲ್ಲಿ ಕಳೆದ ವರ್ಷಗಳಲ್ಲಿ ನಿಧನ ರಾದ ಸಮಾಜದ ಜನರಿಗೆ ನಿಮಿಷಗಳ ಮೌನಾಚ್ರಣೆ ಮಾಡಿ ಶ್ರಧಾಂಜಲಿ ಅರ್ಪಿಸಿದ ನಂತರ ಮಾತನಾಡಿದ ನಾಯಕರು ಸಮಾಜದ ಯುವ ಶಕ್ತಿ ಉನ್ನತ ಮಟ್ಟದ ದಲ್ಲಿ ಬೇಳಲಿ ಎಂದು ಹಾರೈಸಿದರು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ್, ಶಾಸಕ ಶ್ರೀನಿವಾಸ್ ಮಾನೆ, ಸೇರಿದಂತೆ ಮುಂತಾದ ಗಣ್ಯರು ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗವಹಿಸಿದ್ದರಲ್ಲದೆ, ಎಸ್‌ ಎಸ್‌ಕೆ ಸಮಾಜದ ಕೊಡುಗೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಯುವ ಸಂಘಟನೆಯ ಅಧ್ಯಕ್ಷರನ್ನಾಗಿ ಸಿಂಗಂ ಧಲಬಂಜನ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷರು ಡಾ. ನೀಲಕಂಠಸಾ ಜಡಿ ಇವರು ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಮಾಜಿ ಶಾಸಕರು ಶ್ರೀ ಅಶೋಕ ಕಾಟವೆ ಶ್ರೀ ಡಾ ಶಶಿಕುಮಾರ್ ಮೇಹರವಾಡೆ ಉಧ್ಯೊಗ ಪತಿಗಳಾದ ಶ್ರೀ N T ಬದ್ದಿ ಮಾಜಿ MLC ನಾರಾಯಣಸಾ ಭಾಂಡಗೆ, ಎಸ್‌ಎಸ್‌ಕೆ ಕಾರ್ಯದರ್ಶಿ ಶಾಮ್ ಕಬಾಡಿ, KPCC ಸದಸ್ಯರಾದ ಸತೀಶ ಮೆಹರವಾಡೆ, ವಿಠ್ಠಲ ಲದ್ವಾ, ನಾಗೇಶ ಕಲಬುರಗಿ, ಉದ್ಯೋಗಪತಿ ನಾರಾಯಣಸಾ ನಿರಂಜನ್, ಟಿ.ಎಮ್ ಮೆಹರವಾಡೆ N N ಖೋಡೆ HD ಕಾಟವಾ ಮಾರುತಿರಾವ ಪವಾರ ಶ್ರೀ ಕಾತ ಹಬೀಬ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಎಸ್‌ಎಸ್‌ಕೆ ಸಮಾಜದ ಮುಖಂಡರು, ಯುವ ಜನತೆ ಭಾಗವಹಿಸಿದ್ದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/06/2022 06:04 pm

Cinque Terre

60.38 K

Cinque Terre

3

ಸಂಬಂಧಿತ ಸುದ್ದಿ