ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಶ್ವ ಯೋಗ ದಿನಕ್ಕೆ ಕ್ಷಣಗಣನೆ; ವಾಣಿಜ್ಯ ನಗರಿ ಸರ್ವ ಸಿದ್ಧತೆ

ಹುಬ್ಬಳ್ಳಿ: ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ. ಈ ಅಂಗವಾಗಿ ದೇಶಾದ್ಯಂತ ಸಕಲ ಸಿದ್ಧತೆ ನಡೆಯುತ್ತಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯೂ ಸಜ್ಜುಗೊಂಡಿದೆ.

ಹೌದು... ಸದ್ಗುರು ಶ್ರೀ ಸಿದ್ದಾರೂಢಮಠದಲ್ಲಿ ವಿಶ್ವ ಯೋಗ ದಿನ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಮುಂಜಾನೆ 6.45 ರಿಂದ ಯೋಗ ಅಭ್ಯಾಸವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಸಿದ್ದಾರೂಢಮಠದಲ್ಲಿ ಬಿಜೆಪಿ ಪಕ್ಷದಿಂದ ಆಯೋಜನೆ ಮಾಡಿರುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ಸಿದ್ದು ಮೂಗಲಿ ಶೆಟ್ಟರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಲಿದೆ.

ಈಗಾಗಲೇ ಸಿದ್ಧಾರೂಢರ ಮಠದ ಆವರಣದಲ್ಲಿ ರೆಡ್ ಕಾರ್ಪೆಟ್ ಹಾಕಿ ಯೋಗಾಸನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.

ಸ್ಲಗ್: 'ನಾಳೆ ಯೋಗ ಡೇ...ನೀವು ರೆಡಿಯಾ...?'

Edited By : Nagesh Gaonkar
Kshetra Samachara

Kshetra Samachara

20/06/2022 10:34 pm

Cinque Terre

32.31 K

Cinque Terre

0

ಸಂಬಂಧಿತ ಸುದ್ದಿ