ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗ್ರಾಮದೇವಿ ಜಾತ್ರೋತ್ಸವದಲ್ಲಿ ಸಮಾನತೆಯ ಹವಾ; ಶಾಸಕ ಅಮೃತ

ಧಾರವಾಡ: ಸಮಾಜದಲ್ಲಿ ಯಾರೂ ಬಡವರಲ್ಲ, ಯಾರೂ ಶ್ರೀಮಂತರಲ್ಲ ಎಂಬ ಭಾವನೆ ಹೋಗಲಾಡಿಸಲು ಜಾತ್ರೆಗಳು ಸಹಕಾರಿ. ಅದೇ ರೀತಿ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಈ ತಾರತಮ್ಯ ಹೋಗಲಾಡಿಸಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತ್ರೆಗಳಲ್ಲಿ ಎಲ್ಲರೂ ಸಮಾನರಾಗಿ ಪಾಲ್ಗೊಳ್ಳುತ್ತಾರೆ. ಜಾತ್ರಾ ಮಹೋತ್ಸವದ ಪ್ರಸಾದವನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸುತ್ತಾರೆ. ಬಡವ- ಬಲ್ಲಿದ ಎಂಬ ಭಾವನೆಗಳನ್ನು ಈ ಜಾತ್ರೆಗಳು ಹೋಗಲಾಡಿಸುತ್ತವೆ ಎಂದರು.

ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಮಾತನಾಡಿ, 21 ವರ್ಷಗಳ ನಂತರ ಉಪ್ಪಿನ ಬೆಟಗೇರಿಯಲ್ಲಿ ನಡೆಯುತ್ತಿರುವ ಈ ಜಾತ್ರೆ ಒಗ್ಗಟ್ಟನ್ನು ಪ್ರದರ್ಶಿಸಿದೆ. ಸಮಾನತೆಯ ಸಂದೇಶ ಸಾರಿದೆ ಎಂದರು. ನಂತರ ಪಂಡಿತ್ ಕಲ್ಲಿನಾಥ ಶಾಸ್ತ್ರಿಗಳು ಪ್ರವಚನ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

07/05/2022 10:15 pm

Cinque Terre

19.65 K

Cinque Terre

0

ಸಂಬಂಧಿತ ಸುದ್ದಿ