ನವಲಗುಂದ : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ವತಿಯಿಂದ ನವಲಗುಂದ ಪಟ್ಟಣದ ಗಣಪತಿ ದೇವಸ್ಥಾನದಿಂದ ಗಾಂಧಿ ಮಾರುಕಟ್ಟೆಯವರೆಗೆ ಪಂಜಿನ ಮೆರವಣಿಗೆ ಮಾಡುವ ಮೂಲಕ ವೀರಪುತ್ರರನ್ನು ಸ್ಮರಿಸಿದರು.
ಸುಖದೇವ್, ಭಗತ್ ಸಿಂಗ್, ರಾಜಗುರು ಅವರನ್ನು ಬ್ರಿಟಿಷರು 23ನೇ ಮಾರ್ಚ್ 1931ರಂದು ಗಲ್ಲಿಗೇರಿಸಿದ ನಿಮಿತ್ತ ಮಹಾನ್ ದೇಶಭಕ್ತರ ತ್ಯಾಗ, ಬಲಿದಾನದ ಸ್ಮರಣೆಗೆ ಈ ದಿನವನ್ನು ‘ರಾಷ್ಟ್ರೀಯ ಬಲಿದಾನ್ ದಿನ’ ಎಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ನೂರಾರು ಕಾರ್ಯಕರ್ತರು ಕೈಯಲ್ಲಿ ಪಂಜನ್ನು ಹಿಡಿದು, ಮೆರವಣಿಗೆ ಮಾಡಿದರು.
ಈ ಸಂಧರ್ಭದಲ್ಲಿ ನವಲಗುಂದ ತಾಲೂಕಾ ಬಿಜೆಪಿ ಅಧ್ಯಕ್ಷರಾದ ಎಸ್.ಬಿ ದಾನಪ್ಪಗೌಡರ, ನವಲಗುಂದ ನಗರ ಘಟಕ ಬಿಜೆಪಿ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ತಾಲೂಕಾ ಯುವ ಮೋರ್ಚಾ ಅಧ್ಯಕ್ಷರು ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಮಹೇಶ ಸುಣಗಾರ, ಪುರಸಭೆ ಸದಸ್ಯರು ಶರಣಪ್ಪ ಹಕ್ಕರಕಿ, ಪ್ರಭುಗೌಡ ಇಬ್ರಹಿಂಪುರ, ಬಸವರಾಜ ಕಾತರಕಿ, ಎಂ ಬಿ ತೋಟಿ, ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ವಿನಾಯಕ ದಾಡಿಬಾವಿ, ಸಿದ್ದು ಪೂಜಾರ ಸೇರಿದಂತೆ ಹಲವರು ಇದ್ದರು.
Kshetra Samachara
23/03/2022 10:22 pm