ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಾತಿ-ಮತ ಭೇದ ಮರೆತು ಜಗ್ಗಲಗಿ ಹಾಗೂ ಹೋಳಿ ಹಬ್ಬ ಆಚರಿಸಿ-ಸಚಿವ ಮುನೇನಕೊಪ್ಪ ಕರೆ

ಹುಬ್ಬಳ್ಳಿ: ಹೋಳಿ ಹಬ್ಬ ಹಾಗೂ ಜಗ್ಗಲಗಿ ಹಬ್ಬ ನಮ್ಮ ಭಾರತೀಯ ಪರಂಪರೆಯ ಹಬ್ಬಗಳು ಇಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೆ ಆಚರಣೆ ಮಾಡಬೇಕು ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ನಾಳೆ ನಡೆಯಲಿರುವ ಜಗ್ಗಲಗಿ ಹಬ್ಬದ ಪ್ರಯುಕ್ತವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಈ ಬಾರಿಗೆ ನಾವೆಲ್ಲರೂ ಕೋವಿಡ್‌ನಿಂದ ಹೊರ ಬಂದಿದ್ದೇವೆ ಈ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷ ಭೇದ, ವರ್ಗ ಭೇದ ಮರೆತು ಆಚರಣೆ ಮಾಡಬೇಕಿದೆ ಎಂದರು.

ಬಾಗಲಕೋಟ, ನವಲಗುಂದ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಾಮಣ್ಣನ ಸ್ಥಾಪನೆ ದರ್ಶನಕ್ಕೆ ದೊಡ್ಡದಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಹಾಗೂ ಬಾಗಲಕೋಟೆ ಮಾದರಿಯಲ್ಲಿ ಸಾರ್ವಜನಿಕ ಹೋಳಿ ಆಚರಣೆಗೆ ಸರ್ಕಾರ ನೆರವು ನೀಡುವ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೊಂದಿಗೆ ಚರ್ಚಿಸಿ ಸರ್ಕಾರ ಗಮನಕ್ಕೆ ತರುವ ಕಾರ್ಯವನ್ನು ಮಾಡುತ್ತೇನೆ ಎಂದು ಅವರು ಹೇಳಿದರು.

ಹೋಳಿ ಆಚರಣೆಯ ಕುರಿತು ಎಲ್ಲವೂ ಸರ್ಕಾರದ ಮೇಲೆಯ ಅವಲಂಬನೆಯಾಗುವುದು ಸರಿಯಲ್ಲ. ಇಲ್ಲಿ ಜನರೇ ಸ್ವಯಂಪ್ರೇರಿತರಾಗಿ ಆಹಾರ ವಿತರಣೆ, ನೀರು ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

Edited By :
Kshetra Samachara

Kshetra Samachara

19/03/2022 01:37 pm

Cinque Terre

29.72 K

Cinque Terre

1

ಸಂಬಂಧಿತ ಸುದ್ದಿ