ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಪ್ರೊ. ನಂಜುಂಡಸ್ವಾಮಿ ಜನ್ಮದಿನ ರಾಷ್ಟ್ರೀಯ ರೈತ ದಿನವಾಗಲಿ"

ಬೆಂಗಳೂರು: ರೈತ ಹೋರಾಟಗಾರ, ರೈತ ಚಳುವಳಿಯ ದಿಕ್ಕನ್ನು ದೇಶವ್ಯಾಪಿಗೊಳಿಸಿದ ರೈತರ ಕಣ್ಮಣಿ ಪ್ರೊ.ನಂಜುಂಡಸ್ವಾಮಿ ಅವರ ಹೆಸರೇ ರೈತರಿಗೆ ಸ್ಫೂರ್ತಿಯಾಗಿತ್ತು. ರೈತ ಹೋರಾಟಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ಪ್ರೊ.ನಂಜುಂಡಸ್ವಾಮಿ.

ಇಂದು ಪ್ರೊ. ನಂಜುಂಡಸ್ವಾಮಿ ಅವರ 86ನೇ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಬಳ್ಳಾರಿ ರಸ್ತೆ ಪ್ಯಾಲೇಸ್ ಗುಟ್ಟಹಳ್ಳಿ ಮುಖ್ಯರಸ್ತೆಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜೈಕಾರ ಹಾಕಿದರು.

ಈ ಸಂದರ್ಭ ರೈತರ ಬೆಳೆಗೆ ಬೆಂಬಲ ಬೆಲೆ ಘೋಷಿಸಲು ಸರ್ಕಾರವನ್ನು ಒತ್ತಾಯಿಸಲಾಯಿತು. ಪ್ರೊ.ನಂಜುಂಡಸ್ವಾಮಿ ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಬೇಕು ಹಾಗೂ ಜನ್ಮದಿನವನ್ನು ರಾಷ್ಟ್ರೀಯ 'ರೈತ ದಿನ' ವನ್ನಾಗಿ ಘೋಷಿಸಬೇಕೆಂದೂ ಸರ್ಕಾರಗಳನ್ನು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

13/02/2022 05:57 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ