ಕಲಘಟಗಿ: ಡಾ.ರಾಧಾಕೃಷ್ಣನ್ ದೃಷ್ಠಿಯಲ್ಲಿ ಶಿಕ್ಷಕರು ದೇಶದ ಸಂಸ್ಕೃತಿಯ ರಾಯಬಾರಿಗಳಾಗಿದ್ದಾರೆ ಎಂದು ಶಾಸಕ ಸಿ. ಎಂ ನಿಂಬಣ್ಣವರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಷ್ಟ್ರವನ್ನು ಪುನರ್ ನಿರ್ಮಿಸುವ ಶಕ್ತಿಯನ್ನು ಶಿಕ್ಷಕರು ಹೊಂದಿದ್ದು, ದೇಶದ ಹಿರಿಮೆ, ಗರಿಮೆಗಳನ್ನು ಅರ್ಥೈಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.
ತಹಸೀಲ್ದಾರ ಯಲ್ಲಪ್ಪ ಗೊಣ್ಣೆಣವರ,ಸಿಪಿಐ ಪ್ರಭು ಸೂರಿನ,ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್,ಎನ್ ಎಫ್ ಕಟ್ಟೇಗೌಡರ,ಆರ್.ಎಂ ಹೋಲ್ತಿಕೋಟಿ,ಬಿ.ಜಿ ಬಿರಾದಾರ,ಐ. ವಿ ಜವಳಿ,ಎಸ್ ಎ ಚಿಕ್ಕನರ್ತಿ,ರಂಗನಾಥ ವಾಲ್ಮೀಕಿ ಇದ್ದರು.
Kshetra Samachara
05/09/2021 10:27 pm