ಧಾರವಾಡ : ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನದ ದಿನಾಚರಣೆಯ ಅಂಗವಾಗಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಅಜಾದ್ ಪಾರ್ಕ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.
1942 ರಲ್ಲಿ ಮುಂಬೈನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮಹಾತ್ಮಾ ಗಾಂಧೀಜಿಯವರು ದೇಶಕ್ಕೆ ಬ್ರಿಟಿಷ್ ರೆ ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ ಕರೆ ಕೊಟ್ಟರು.2 ನೆ ವಿಶ್ವ ಮಹಾ ಯುದ್ಧದ ಈ ಸಂದರ್ಭದಲ್ಲಿ ಬ್ರಿಟಿಷರು ದೇಶ ವ್ಯಾಪ್ತಿ ಬಹು ಪಾಲು ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಈ ಆಂದೋಲನವನ್ನು ವಿಫಲಗೊಳಿಸುವ ಪ್ರಯತ್ನ ಮಾಡಿದರು.ಆದರೂ ದೇಶವ್ಯಾಪಿ ಈ ಆಂದೋಲನ ಯಶಸ್ವಿಯಾಗಿ ನಡೆಯಿತಲ್ಲದೆ ಆಂದೋಲನ ನಿರತ ಸಹಸ್ರಾರು ಜನ ತಮ್ಮ ಪ್ರಾಣವನ್ನೂ ಕಳೆದುಕೊಂಡರು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ತುರಮುರಿ,ಪಿಎಚ್ ನಿರಲಕೇರಿ,ಯಾಶಿನ ಹಾವೆರಿಪೆಟ, ಆನಂದ ಸಿಂಗನಾಥ, ಸಿದ್ದಣ್ಣ ಸಪೂರಿ,ಮಂಜುನಾಥ ಭೊವಿ,ರೊಹನ ಹಿಪ್ಪರಗಿ,ಸ್ವಾತಿ ಮಾಳಗಿ,ಸರೊಜಾ ಪಾಟಿಲ,ಪ್ರಬಾವತಿ ವಡ್ಡಿನ,ಸೌರಬ ಮಾಸೆಕರ, ನವಿನ ಕದಂ,ರಾಜಶೇಖರ ಮೆಣಸಿನಕಾಯಿ,ಶರಣಪ್ಪ ಕೊಟಗಿ, ರಾಜು ಕಮತಗಿ ಇತರರು ಉಪಸ್ಥಿತರಿದ್ದರು
Kshetra Samachara
09/08/2021 02:31 pm