ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂವಿಧಾನ ಜಾರಿಗೆ ಬಂದ ದಿನೋತ್ಸವನ್ನು ಬಿಜೆಪಿ ಎಸ್ ಸಿ, ಎಸ್ ಟಿ ಯುವ ಮೋರ್ಚಾ ವತಿಯಿಂದ ಆಚರಣೆ

ಹುಬ್ಬಳ್ಳಿ: ಇಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ, ಸಂವಿಧಾನ ಪುಸ್ತಕ ಜಾರಿಗೆ ಬಂದಂತಹ ದಿನ ಎಂದು, ನಗರದ ದುರ್ಬಲ ಬೈಲ್ ಸರ್ಕಲ್ ದಲ್ಲಿ ಕ್ಷೇತ್ರದ ಅಧ್ಯಕ್ಷರಾದಂತಹ ಪ್ರಭು ನವಲಗುಂದ ಮಠ ಅಧ್ಯಕ್ಷತೆಯಲ್ಲಿ ಬಿಜೆಪಿ ಯುವ ಮೋರ್ಚಾ ಎಸ್ ಸಿ. ಎಸ್ ಟಿ ಅಧ್ಯಕ್ಷರುಗಳಾದ ಜಸ್ವಂತ್ ಜಾಧವ, ಮಾರುತಿ ಚಾಕಲಬ್ಬಿ, ಇವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಆಚರಣೆ ಮಾಡಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ರಾಜ್ಯ ಓಬಿಸಿ ಮೋರ್ಚಾದ ಕಾರ್ಯದರ್ಶಿ ಸತೀಶ್ ಶೇಜ್ವಾಡ್ಕರ್, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ರಾಜ್ಯ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಮಹೇಂದ್ರ ಕೌತಾಳ, ರಾಜ್ಯ ಎಸ್ ಟಿ ಮೋರ್ಚಾದ ಕಾರ್ಯದರ್ಶಿ ಅರುಣ್ ಕುಮಾರ್ ಹುದ್ಲಿ, ರಾಜ್ಯ ಸಾರಿಗೆ ನಿರ್ದೇಶಕ ರಾಜು ಜರ್ತಾರಘರ, ಮಾಜಿ ಮಂಡಲದ ಅಧ್ಯಕ್ಷ ಶಿವು ಮೆಣಸಿನಕಾಯಿ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಚಂದ್ರಶೇಖರ್ ಗೋಕಾಕ್ , ಮಾಜಿ ಮಹಾಪೌರರಾದ ಡಿ ಕೆ ಚೌವ್ಹಾಣ, ಶಂಕ್ರಪ್ಪ ಚಬ್ಬಿ, ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದಬಸವರಾಜ್ ಅಮ್ಮಿನಬಾವಿ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.....

Edited By : Manjunath H D
Kshetra Samachara

Kshetra Samachara

26/01/2021 04:30 pm

Cinque Terre

23.03 K

Cinque Terre

1

ಸಂಬಂಧಿತ ಸುದ್ದಿ