ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ್ ಬಿಡುಗಡೆಗೆ ನಡೆಯಿತು ಗಣಹೋಮ

ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಆರೋಪ ಮುಕ್ತರಾಗಿ ಬರುವಂತೆ ಧಾರವಾಡದ ಗಣೇಶನಗರ ಬಲಮುರಿ ಗಣೇಶ ದೇವಸ್ಥಾನದಲ್ಲಿ ಗಣಹೋಮ ಮಾಡಲಾಗಿದೆ.

ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ಕೂಡಿಕೊಂಡು ಬಲಮುರಿ ದೇವಸ್ಥಾನದಲ್ಲಿ ಈ ಗಣಹೋಮ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುತ್ತೈದೆಯರಿಗೆ ಉಡಿ ಕೂಡ ತಂಬಿದ್ದಾರೆ.

ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲು ಸೇರಿ ಇದೀಗ ಎರಡು ತಿಂಗಳಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ವಿನಯ ಅವರ ಅಭಿಮಾನಿಗಳು ನಿನ್ನೆಯಿಂದ ಅನೇಕ ಕಡೆಗಳಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ವಿನಯ್ ಅವರು ಆರೋಪ ಮುಕ್ತರಾಗಿ ಜೈಲಿನಿಂದ ಹೊರಗಡೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

05/01/2021 01:07 pm

Cinque Terre

31.53 K

Cinque Terre

1

ಸಂಬಂಧಿತ ಸುದ್ದಿ