ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಮಾಜಿ ಸಚಿವ ಸಂತೋಷ ಲಾಡ ಅವರಿಂದ ಗ್ರಾ ಪಂ ನೂತನ ಸದಸ್ಯರ ಭೇಟಿ‌ ಹಾಗೂ ಹೊಸ ವರ್ಷಾಚರಣೆ

ಕಲಘಟಗಿ:ಮಾಜಿ ಸಚಿವ ಸಂತೋಷ ಲಾಡ ಅವರು‌ ಗ್ರಾ ಪಂ ನೂತನ ಸದಸ್ಯರ ಭೇಟಿ‌ ಹಾಗೂ ಹೊಸ ವರ್ಷಾಚರಣೆಯನ್ನು‌‌ ಮಾಡಿದರು.

ಶನಿವಾರ ಸಂಜೆ ಅಮೃತ ನಿವಾಸದಲ್ಲಿ ತಮ್ಮ ಕುಟುಂಬ‌ದವರೊಂದಿಗೆ ಹೊಸ ವರ್ಷದ ಆಚರಣೆಯನ್ನು ಮಾಜಿ ಸಚಿವ ಸಂತೋಷ ಲಾಡ್ ‌ಕೇಕ್ ಕಟ್ಟಮಾಡುವ ಮೂಲಕ‌ ಆಚರಿಸಿ‌ ಮಾತನಾಡಿ,ಕಲಘಟಗಿ ಕ್ಷೇತ್ರದ ಜನತೆ ತಮ್ಮ ಕುಟುಂಬದ ಮೇಲೆ ಇಟ್ಟ ಅಭಿಮಾನಕ್ಕೆ ಆಭಾರಿಯಾಗಿದ್ದಾಗಿ ಹಾಗೂ ಯಲ್ಲಾಪುರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಸಂಶಯ ಬೇಡ ಕಲಘಟಗಿಯಲ್ಲಿಯೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಕಾರ್ಯಕರ್ತರು ಸನ್ಮಾನಿಸಿದರು

ತಾಲೂಕಿನ ಗ್ರಾ ಪಂಗಳ ನೂತನ ಸದಸ್ಯರು,ಕಾಂಗ್ರೆಸ್ ಮುಖಂಡರು,ಜನ ಪ್ರತಿನಿಧಿಗಳು,ಎಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

02/01/2021 10:54 pm

Cinque Terre

35.58 K

Cinque Terre

0

ಸಂಬಂಧಿತ ಸುದ್ದಿ