ಹುಬ್ಬಳ್ಳಿ: ಶ್ರೀರಾಮನವಮಿ ಆಚರಣೆ ಅಂದರೆ ದೇಶಾದ್ಯಂತ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಇದಕ್ಕೆ ವಾಣಿಜ್ಯನಗರಿ ಕೂಡ ಹೊರತಾಗಿಲ್ಲ. ಹುಬ್ಬಳ್ಳಿಯಲ್ಲಿ ಸ್ವತಃ ಕೇಂದ್ರ ಸಚಿವರೇ ಡಿಜೆ ಹಾಡಿಗೆ ಸ್ಟೇಫ್ ಹಾಕುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಎಲ್ಲೆಂದರಲ್ಲಿ ಕೇಸರಿ ಬಾವುಟಗಳ ಕಲರವ, ಡಿಜೆ ಹಾಡಿನ ಸಂಭ್ರಮ ಹೀಗೆ ಹತ್ತು ಹಲವು ಕಡೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿ. ಇದೆಲ್ಲದರ ಮಧ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯಿಂದ ಭರ್ಜರಿ ಸ್ಟೆಪ್ ಹಾಕಿ ಶ್ರೀರಾಮನವಮಿ ಮೆರಗನ್ನು ಹೆಚ್ಚಿಸಿದ್ದಾರೆ.
ಇನ್ನೂ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾರ್ಯಕರ್ತರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂಭ್ರಮಿಸಿದರು. ರಾಮನವಮಿ ನಿಮಿತ್ತ ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮ ನಾಮಕ್ಕೆ ತಲೆದೂಗುತ್ತ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ನಂತರದಲ್ಲಿ ಇಂತಹ ಆಚರಣೆಗಳು ಮತ್ತೇ ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವರೇ ಡ್ಯಾನ್ಸ್ ಮಾಡಿದ್ದು, ಯುವಕರಿಗೆ ಮತ್ತಷ್ಟು ಜೋಶ್ ಸಿಕ್ಕಂತಾಗಿದ್ದು, ಅದ್ದೂರಿಯಾಗಿ ಶ್ರೀರಾಮನವಮಿ ಆಚರಣೆ ಮಾಡಲಾಯಿತು.
Kshetra Samachara
10/04/2022 10:14 pm