ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಾರ್ಚ್ 18, & 19 ರಂದು ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ಸಮಾವೇಶ

ಹಲವಾರು ಬೇಡಿಕೆಗಳ ಈಡೇರಿಕೆಗೆ, ಹಾಗೂ ದಲಿತಪರ ಚಿಂತನೆಗಳನ್ನು ಮುಂಬರುವ ದಿನಗಳಲ್ಲಿ ಹೇಗೆ ಯಾವ ರೀತಿ ಮಾಡಬೇಕು ಎಂಬುದನ್ನು ಅರಿಯಲು, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶವನ್ನು ದಾವಣಗೆರೆ ಚಲೋ ಕಾರ್ಯಕ್ರಮ ವನ್ನು ಹಮ್ಮಿಕೋಳ್ಳಲಾಗಿದೆ ಎಂದು ಎಸ್. ಫಕ್ಕಿರಪ್ಪ ಸಂಘಟನೆಯ ರಾಜ್ಯ ಸಂಚಾಲಕರು ಹೇಳಿದರು.

ಮಾರ್ಚ್ 18 ಮತ್ತು 19 ರಂದು ಸಾಮಾನ್ಯ ಸಭೆಯು ಪಾರ್ವತೆಮ್ಮ ಶ್ಯಾಮನೂರ ಶಿವಶಂಕರಪ್ಪ ಕಲ್ಯಾಣ ಮಂದಿರ ಹದಡಿ ರಸ್ತೆ ದಾವಣಗೆರೆಯಲ್ಲಿ ನೆರವೇರಲಿದೆ ಎಂದರು.

ಪ್ರತಿ ಮೂರು ವರ್ಷಕ್ಕೆ ರಾಜ್ಯದಿಂದ ಸಮಿತಿಗಳು ಸೇರಿ ದಲಿತಪರ ಚಿಂತನೆಗಳನ್ನು ಮುಂಬರುವ ದಿನಗಳಲ್ಲಿ ಅಗುವ ಕಾರ್ಯಕ್ರಮಗಳ ಬಗ್ಗೆ ಈ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು. ಸಂದರ್ಭದಲ್ಲಿ ರಾಜ್ಯದ ಎಲ್ಲಾ ದಿಕ್ಕಿನಿಂದಲು ಪಧಾದಿಕಾರಿಗಳು ಕಾರ್ಯಕರ್ತರು ಸೇರಲಾಗುತ್ತದೆ ಅದೆ ರೀತಿ ಧಾರವಾಡ ಜಿಲ್ಲೆಯಿಂದ 500 ಕ್ಕೂ ಹೇಚ್ಚು ಜನರು ಸೇರಲಿದ್ದಾರೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/03/2022 12:29 pm

Cinque Terre

114.56 K

Cinque Terre

0

ಸಂಬಂಧಿತ ಸುದ್ದಿ