ವಾರಕರಿ ಸಂಪ್ರದಾಯ ನಿಜಕ್ಕೂ ಎಂತವರನ್ನೂ ಕೂಡ ಒಂದು ಹೆಜ್ಜೆ ಕುಣಿಯುವಂತೆ ಮಾಡುತ್ತದೆ. ನಾದ ಪ್ರೀಯ ವಿಠ್ಠಲನ ಆರಾಧನೆಯ ಈ ವಿಶೇಷ ಭಜನೆಯು ಕೇಂದ್ರ ಸಚಿವರನ್ನು ಹಾಗೂ ರಾಜ್ಯ ಸಚಿವರನ್ನು ಕೂಡ ಕ್ಷಣಕಾಲ ಭಜನೆ ಮಾಡುವಂತೆ ಮಾಡಿದೆ.
ಹೌದು.. ವಿಠ್ಠಲ.. ವಿಠ್ಠಲ.. ಪಾಂಡುರಂಗ.. ಎಂಬುವಂತ ಪಾಂಡುರಂಗನ ಆರಾಧನೆಯ ವಾರಕರಿ ಪಂಥದ ಸಂತರು ಚೆನ್ನಮ್ಮ ವೃತ್ತದ ಈದ್ಗಾದಲ್ಲಿ ಗಣೇಶೋತ್ಸವ ಆಚರಣೆ ವೇಳೆ ಭಜನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಅವರು ತಾಳ ಮೃದಂಗದ ನಾದಕ್ಕೆ ಹೆಜ್ಜೆ ಹಾಕುವ ಮೂಲಕ ಭಜನೆ ಮಾಡಿದ್ದಾರೆ.
ಇನ್ನೂ ಮಹಾರಾಷ್ಟ್ರ ಭಾಗದ ಪಂಢರಪುರದಲ್ಲಿರುವ ಪಾಂಡುರಂಗನ ದರ್ಶನಕ್ಕೆ ಹೋಗುವ ವಾರಕರಿ ಸಂಪ್ರದಾಯದ ಸಂತರು ದಾರಿಯುದ್ದಕ್ಕೂ ಭಜನೆ ಮಾಡುತ್ತಾ ಮರಾಠಿ ಹಾಗೂ ಕನ್ನಡದಲ್ಲಿ ಪಾಂಡುರಂಗನ ವರ್ಣನೆ ಮಾಡುತ್ತಾ ಹೊರಡುತ್ತಾರೆ. ಇಂತಹ ಸುಂದರವಾದ ಭಜನೆಯು ಗಣೇಶೋತ್ಸವ ಆಚರಣೆಯಲ್ಲಿ ಮೆರುಗು ತಂದಿದ್ದು, ಮಾತ್ರವಲ್ಲದೆ ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಭಾವಪರವಶ ಆಗುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.
Kshetra Samachara
01/09/2022 03:07 pm