ಕುಂದಗೋಳ : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭವಾದ ಕುಂದಗೋಳ ಪಟ್ಟಣದ ಹಿಂಗಾರು ಕಡಲೆ ಖರೀದಿ ಕಡಲೆ ಆಮದು ಹೆಚ್ಚಾದ ಕಾರಣ ಇಂದು ಖರೀದಿ ಪ್ರಕ್ರಿಯೆ ನಿಲ್ಲಿಸಿದೆ.
ಹೌದು ! ಕುಂದಗೋಳ ಪಟ್ಟಣದ ಎಪಿಎಂಸಿ ಆವರಣದ 1000 ಮೇಟ್ರಿಕ್ ಟನ್ ಸಾಮರ್ಥ್ಯದ ಗೂಡೌನ್ ಸಂಪೂರ್ಣ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಸಿ ಭರ್ತಿಯಾಗಿದ್ದು, ಸ್ಥಳಾವಕಾಶದ ಕೊರತೆ ಕಾರಣ ಇಂದಿನ ಕಡಲೆ ಖರೀದಿ ಪ್ರಕ್ರಿಯೆ ಕ್ಲೋಸ್ ಆಗಿದೆ.
ಈಗಾಗಲೇ 900 ಕ್ಕೂ ಅಧಿಕ ಅರ್ಜಿಗಳು ಕುಂದಗೋಳದ ಕಡಲೆ ಖರೀದಿ ಕೇಂದ್ರಕ್ಕೆ ಬಂದಿದ್ದು, ಕಳೆದ ಸೋಮವಾರದಿಂದ ಇಲ್ಲಿಯವರೆಗೆ 2511 ಕ್ವಿಂಟಾಲ್ ಕಡಲೆ ಖರೀದಿಯಾಗಿದೆ.
ಒಟ್ಟಾರೆ ಹಿಂಗಾರು ಕಡಲೆ ಬೆಳೆ ಉತ್ತಮವಾಗಿ ಬಂದಿದ್ದು, ಸರಕಾರದಿಂದ ಉತ್ತಮ ಬೆಲೆ ಸಹ ಕಡಲೆಗೆ ಲಭ್ಯವಾದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಎಪಿಎಂಸಿ ಮಾರುಕಟ್ಟೆಗೆ ಕಡಲೆ ಮಾರಾಟ ಮಾಡಿದ್ದಾರೆ.
ಇಂದು ಎಪಿಎಂಸಿಯಲ್ಲಿ ಶೇಖರಣೆಯಾದ ಕಡಲೆ ಬೇರೇಡೆ ಸ್ಥಳಾಂತರಗೊಂಡ ನಂತರದಲ್ಲಿ ನಾಳೆ ಎಂದಿನಂತೆ ಕಡಲೆ ಖರೀದಿ ಪ್ರಕ್ರಿಯೆ ನಡೆಯಲಿದೆ.
Kshetra Samachara
23/03/2022 06:29 pm