ಕುಂದಗೋಳ : ಕುಂದಗೋಳ ಮತಕ್ಷೇತ್ರದ ಅಭಿವೃದ್ಧಿ ಹರಿಕಾರ ದಿವಂಗತ ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರ ನೆನಪಿಗೆ ಮೂರು ವರ್ಷ ತುಂಬಿದೆ.
ಅದರಂತೆ ಅವರ ಮೂರನೇ ಪುಣ್ಯಸ್ಮರಣೆ ಕಾರ್ಯಕ್ರಮವು ಸಹ ಅತಿ ಅದ್ಧೂರಿಯಾಗಿ ನೆರವೇರಿ ಶಾಸಕಿ ಕುಸುಮಾವತಿ ಶಿವಳ್ಳಿಗೆ ಕಾಂಗ್ರೆಸ್ ಮುಖಂಡರ ಬಲ, ಜನಾರ್ಶಿವಾದದ ಆತ್ಮ ವಿಶ್ವಾಸದ ಛಲ ತುಂಬಿದೆ.
ದಿವಂಗತ ಮಾಜಿ ಸಚಿವ ಸಿ.ಎಸ್.ಶಿವಳ್ಳಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ಶ್ರಿನಿವಾಸ್ ಮಾನೆ, ಶಾಸಕ ಪ್ರಸಾದ್ ಅಬ್ಬಯ್ಯ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಎಂ.ಎಸ್.ಅಕ್ಕಿ ಅವರು ಮಾತುಗಳಲ್ಲಿ, ಮುಕ್ತಿ ಮಂದಿರದ ವಿಮಲ ರೇಣುಕ ಮುಕ್ತಿ ಮುನಿಶ್ರೀಗಳ ಆಶೀರ್ವಚನದಲ್ಲೂ ದಿವಂಗತ ಮಾಜಿ ಸಚಿವ ಶಿವಳ್ಳಿಯವರ ಪರೋಪಕಾರದ ಗಣಗಾನ,
ಅವರ ಕಾರ್ಯವೈಖರಿ ಕುರಿತ ಮಾತುಗಳಿಗೆ ವೇದಿಕೆಯಲ್ಲಿ ನೆರೆದ ಜನ ಹೌದು ಹೌದು ಎಂದ ಕ್ಷಣಗಳು ದಿವಂಗತ ಸಿ.ಎಸ್.ಶಿವಳ್ಳಿ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿದ್ದವು.
ತಾನು ಬದುಕಿದ್ದಾಗ ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಅನಾರೋಗ್ಯ ಪೀಡಿತರಿಗಾಗಿ ರಕ್ತದಾನ ಶಿಬಿರ ಏರ್ಪಡಿಸಿ ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದರು, ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲೂ ಸ್ವಯಂ ಪ್ರೇರಿತರಾಗಿ 100 ಜನ ಅಭಿಮಾನಿಗಳು ರಕ್ತದಾನ ಮಾಡಿದ್ದು, ಅಗಲಿದ ನಾಯಕನ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ಸಂದ ವಾತ್ಸಲ್ಯ ಎಂಬುದು ಸಾಬೀತಾಯಿತು.
ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ್, ಕಲ್ಯಾಣಪುರ ಬಸವಣ್ಣನವರು, ಬೆಳಗಾವಿ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶ್ರೀ, ಶಿವಯೋಗಿಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಳೆ ತಂದರು.
ಶಾಸಕಿ ಕುಸುಮಾವತಿ ಶಿವಳ್ಳಿ ಆಹ್ವಾನದ ಮೇರೆಗೆ ಮಾಜಿ ಸಚಿವ ದಿವಂಗತ ಸಿ.ಎಸ್.ಶಿವಳ್ಳಿ ಪುಣ್ಯಸ್ಮರಣೆಗೆ ಆಗಮಿಸಿದ ಸರ್ವರಿಗೂ ಮತ್ತೊಮ್ಮೆ ಕೃತಜ್ಞತೆಗಳು, ಮರೆಯದ ನಾಯಕ ಕುಂದಗೋಳ ಮತಕ್ಷೇತ್ರದ ಜನರ ಹೃದಯದಲ್ಲಿ ಚಿರಸ್ಥಾಯಿ
ಪೂಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿಮಾನದ ಕೃತಜ್ಞತೆಗಳು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/03/2022 06:23 pm