ಹುಬ್ಬಳ್ಳಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ನೈರುತ್ಯ ರೈಲ್ವೆ ವಲಯದಿಂದ ಸಂತಾಪ ಸೂಚಿಸಲಾಯಿತು. ನಗರದ ಗದದ ರಸ್ತೆಯಯಲ್ಲಿರುವ ನೈರುತ್ಯ ರೈಲ್ವೆ ಪ್ರಧಾನ ಕಚೇರಿಯಲ್ಲಿ ಅಂಗಡಿಯವರ ಭಾವಚಿತ್ರಕ್ಕೆ ಹೂವಿನ ಗೌರವ ಸಲ್ಲಿಸಿ, ಮೌನಾಚಾರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೊರಲಾಯಿತು.
ಸೌತ್ ವೆಸ್ಟರ್ನ್ ರೈಲ್ವೆ ಪ್ರಧಾನ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲದೇ ಬೆಂಗಳೂರು, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಗಳು, ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ಮುಖ್ಯ ಆಡಳಿತಾಧಿಕಾರಿ ನಿರ್ಮಾಣ, ಕಾರ್ಯಾಗಾರಗಳು, ಲೊಕೊ ಶೆಡ್‌ಗಳಲ್ಲಿಯ ಸಿಬ್ಬಂದಿ ಸುರೇಶ ಅಂಗಡಿಯರ ಭಾವಚಿತ್ರಕ್ಕೆ ಹೂಗುಚ್ಚ ಇಟ್ಟು ಒಂದು ನಿಮಿಷ ಮೌನ ಆಚರಿಸುವುದರ ಮೂಲಕ ಗೌರವ ಸಲ್ಲಿಸಿ ದಿವಂಗತ ಸುರೇಶ್ ಅಂಗಡಿಯವರಿಗೆ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚಿಸಿ ಮಾತನಾಡಿದಸೌತ್ ವೆಸ್ಟರ್ನ್ ರೈಲ್ವೆಯ ಜನರಲ್ ಮ್ಯಾನೇಜರ್ ಶಅಜಯ್ ಕುಮಾರ್ ಸಿಂಗ್ ಅವರು, ಶ್ರೀ ಸುರೇಶ್ ಅಂಗಡಿ ಅವರು ಕಡಿಮೆ ಸಮಯದಲ್ಲಿ ರೈಲ್ವೆ ಇಲಾಖೆಗೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿದರು.
ಬೆಳಗಾವಿ ಮತ್ತು ಸುತ್ತಮುತ್ತಲಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದರು. ಅವರ ಪ್ರಯತ್ನದಿಂದ, ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ, 4 ರೋಡ್ ಓವರ್ ಬ್ರಿಡ್ಜಸ್ ಪೂರ್ಣಗೊಂಡಿತು. 16 ತಿಂಗಳ ಕಾಲ ರೈಲ್ವೆ ರಾಜ್ಯ ಸಚಿವರಾಗಿರುವ ಅವರ ಅಲ್ಪಾವಧಿಯ ಆದರೆ ಮಹೋನ್ನತ ಅವಧಿಯಲ್ಲಿ, ಭಾರತೀಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸುರಕ್ಷತೆಯ ವರ್ಧನೆಗೆ ಬೃಹತ್ ಹೆಜ್ಜೆ ಇಟ್ಟಿದೆ ಎಂದರು.
ಆನ್‌ಲೈನ್‌ನಲ್ಲಿ ಮೂರು ಐತಿಹಾಸಿಕ ಘಟನೆಗಳಿಗೆ ಅವರು ಚಾಲನೆ ನೀಡಿದರು.ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂನ ಸಮರ್ಪಣೆ ಮಾಡಿದರು. ರಾಜ್ಯದ ಹಲವು ಹೊಸ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬೆಳಗಾವಿ ಮತ್ತು ಬೆಂಗಳೂರು ನಡುವೆ ವಿಶೇಷ ರೈಲು, ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢರ ಹೆಸರು ನಾಮಕರಣ ಸೇರಿದಂತೆ ಹಲವು ಕೆಲಸ ಮಾಡಿದ್ದನ್ನು ರೈಲ್ವೆ ಅಧಿಕಾರಿಗಳು ಮೆಲಕು ಹಾಕಿದರು.
Kshetra Samachara
25/09/2020 02:27 pm