ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಲಿಂ.ಶ್ರೀ ಮಡಿವಾಳ ಶಿವಾಚಾರ್ಯರು ನಡೆದಾಡುವ ದೇವರಾಗಿದ್ದರು:ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ:ವೀರ ತಪಸ್ವಿಗಳಾಗಿದ್ದ ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಸ್ವಾಮಿಗಳು ನಡೆದಾಡುವ ದೇವರಾಗಿದ್ದರು ಎಂದು ಶಾಸಕ ಸಿ ಎಂ ನಿಂಬಣ್ಣವರ ನುಡಿದರು.

ತಾಲೂಕಿನ ದಾಸ್ತಿಕೊಪ್ಪ‌‌ ಹನ್ನೆರಡು ಮಠದ ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಲಿಂಗಾಂಗಸಾಮರಸ್ಯದ ೩೦ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ,ಶ್ರೀ ಗಳು ಕಲಿಯುಗದ ಉದ್ಧಾರಕ್ಕಾಗಿ ಜನಿಸಿ ಭಗವಂತನ ಅವತಾರಿಗಳಾಗಿ ಈ ಭೂಲೋಕದಲ್ಲಿ ಬದುಕಿದ್ದರು ಎಂದರು.

ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು.ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಜಿ ಉಪದೇಶಾಮೃತ ನುಡಿದರು.ವಿವಿಧ ಗ್ರಾಮಗಳ ಸ್ವಾಮಿಗಳು ಧರ್ಮಸಭೆಯಲ್ಲಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

12/12/2020 09:24 pm

Cinque Terre

33.17 K

Cinque Terre

1

ಸಂಬಂಧಿತ ಸುದ್ದಿ