ಹುಬ್ಬಳ್ಳಿ: ರಾಜ್ಯದಲ್ಲಿ ಪ್ರವಾಹ ಬಂದಾಗ ಮನೆಗಳು ನೆಲ ಕಚ್ಚುವುದು ಸಾಮಾನ್ಯ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಘೋಷಣೆ ಸಹ ಮಾಡುತ್ತದೆ. ಆದರೆ ಈ ಹಣ ನಿಜವಾದ ಸಂತ್ರಸ್ತರಿಗೆ ಸಿಗದೆ ಅಧಿಕಾರಿಗಳ ಜೇಬಿಗೆ ಸೇರಿದೆ. ಇಂತದ್ದೊಂದು ಪ್ರಕರಣದ ತನಿಖೆ ನಡೆಸಲಾಗಿತ್ತು. ಈ ತನಿಖೆ ಸರಿಯಾದ ರೀತಿಯಲ್ಲಿ ಸಾಗದೆ ಹಳ್ಳ ಹಿಡಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನೂ ಗೊತ್ತಾ ಈ ಸ್ಟೋರಿ ನೋಡಿ..
ನೆರೆ ಸಂತ್ರಸ್ಥರ ಪರಿಹಾರ ಗೋಲ್‌ಮಾಲ್ ಪ್ರಕರಣ. ತನಿಖಾಧಿಕಾರಿ ವರ್ಗಾವಣೆ, ತಹಶೀಲ್ದಾರ್‌ಗೆ 32 ದಿನಗಳ ಕಾಲ ರಜೆ. ತನಿಖೆ ದಾರಿ ತಪ್ಪುವ ದಿಕ್ಕಿನಲ್ಲಿ, ಕಾಣದ ಕೈಗಳ ಕೈವಾಡ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಬೇನಾಮಿಯವರ ಹೆಸರಿಗೆ ಸಂದಾಯ ಮಾಡಲಾಗಿತ್ತು. ಈ ಮೂಲಕ ವ್ಯವಸ್ಥಿತ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದ ತನಿಖೆ ಸರಿಯಾದ ಹಾದಿಯಲ್ಲಿ ನಡೆದಿದೆ ಎಂಬ ಗುಮಾನಿ, ಅನುಮಾನ ಈಗ ಕಾಡುತ್ತಿದೆ. ನೆರೆ ಹಾವಳಿಗೆ ಬಿದ್ದ ಮನೆಗೆ ಪರಿಹಾರ ನೀಡುವಲ್ಲಿ ಭಾರೀ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನವಲಗುಂದ ವಿಧಾನ ಸಭಾ ಕ್ಷೇತ್ರ ಅಷ್ಟೇ ಅಲ್ಲಾ ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಉಂಟು ಮಾಡಿತ್ತು. ಅಷ್ಟೇ ಬೇಗನೇ ತನಿಖಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿ ಪಾರದರ್ಶಕ ತನಿಖೆಗೆ ಆದೇಶ ಹೊರಡಿಸಿದರು. ಆದರೆ ಅದು ಅಷ್ಟೇ ಬೇಗನೇ ಹಳ್ಳ ಹಿಡಿದಿದೆ.
ಇನ್ನೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ್ರೆ ಹೇಳೋದೆ ಬೇರೆ. ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ. ಹಣ ದುರ್ಬಳಕೆ ಮಾಡಿಕೊಂಡಿದ್ದ ಮಂಜುನಾಥ್‌ನನ್ನ ಈಗಾಗಲೇ ಅಮಾನತು ಮಾಡಲಾಗಿದೆ. ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರಾಜಕಾರಣಿಯೇ ಇರಲಿ, ಅಧಿಕಾರಿಯೇ ಇರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ. ಈಗಾಗಲೇ ತಪ್ಪಿತಸ್ತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಅಮವಾಸ್ಯೆಗೆ 32 ದಿನಗಳ ಕಾಲ ರಜೆ ಕೊಟ್ಟಿರುವ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ..
ಉಪ್ಪು ತಿಂದವನು ನೀರು ಕುಡಿಯಲೇಬೇಕೆನ್ನುವ ಹಾಗೆ ಸಂತ್ರಸ್ತರ ಹಣವನ್ನ ನುಂಗಿದ ಅಧಿಕಾರಿ ಈಗ ಸಸ್ಪೆಂಡ್ ಆಗಿದ್ದಾನೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದ್ರು ಹಿರಿಯ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ. ಒಂದು ವೇಳೆ ಬಂದ್ರು ಸುಮ್ಮನೆ ಕುಳಿತಿದ್ದು ಏಕೆ..? ಈಗ ತನಿಖಾಧಿಕಾರಿಯನ್ನ ಬೇರೆ ಕಡೆ ವರ್ಗಾವಣೆ ಮಾಡಿ, ತಹಶಿಲ್ದಾರರನ್ನ ರಜೆ ಮೇಲೆ ಕಳಿಸಿದ್ದು ಏಕೆ..? ಈ ಪ್ರಕರಣ ಮುಚ್ಚಿ ಹಾಕಲು ಕೆಲಸ ಮಾಡುತ್ತಿರುವ ಆ ಕಾಣದ ಕೈ ಯಾವುದು ಎಂಬುದು ಸಂತ್ರಸ್ತರಿಗೆ ಗೊತ್ತಾಗಬೇಕಿದೆ.
Kshetra Samachara
14/07/2022 08:57 am