ಹುಬ್ಬಳ್ಳಿ: ಖ್ಯಾತ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ಖಂಡನೀಯ. ದ್ವೇಷಗಳು ಕೊಲೆಯಲ್ಲಿ ಅಂತ್ಯವಾಗಬಾರದು. ಹೋಟೆಲ್ ಸಿಬ್ಬಂದಿ ಬೇಜವಾಬ್ದಾರಿತನದಿಂದ ಇಂತಹ ಪ್ರಮಾದ ನಡೆದಿದೆ ಎಂದು ಸುಳ್ಳ ಗ್ರಾಮದ ಬಳಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ಅಂತ್ಯಕ್ರಿಯೆ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಷ್ಟೆ ಹಣಕಾಸಿನ ವ್ಯವಹಾರ ಇದ್ದರೂ ಕೊಲೆನೇ ಮಾರ್ಗ ಅಲ್ಲ. ಕೋರ್ಟ್ ಇದೆ, ನ್ಯಾಯವಿದೆ. ಪೊಲೀಸರು ನಾಲ್ಕು ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಇನ್ನೂ ಇದರಲ್ಲಿ ಹೋಟೆಲ್ ಬೇಜವಾಬ್ದಾರಿತನ ಇದೆ. ಅವರ ಮೇಲೂ ಕೇಸ್ ಹಾಕಬೇಕು. ಹೋಟೆಲ್ ಸಿಬ್ಬಂದಿ ಒಟ್ಟಿಗೆ ಹೋಗಿದ್ದರೆ ಗುರೂಜಿಯ ಜೀವ ಉಳಿಸಬಹುದಾಗಿತ್ತು. ಗುರೂಜಿಯ ಹತ್ಯೆಯಾಗಬಾರದಿತ್ತು ಎಂದು ಅವರು ತೀವ್ರ ಸಂತಾಪ ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 04:35 pm