ಅಣ್ಣಿಗೇರಿ: ಬಸಾಪುರ ಗ್ರಾಮ ಸ್ಥಳಾಂತರ ಹಿನ್ನೆಲೆಯಲ್ಲಿ ನಡೆದ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಯ ಮೇಲೆ ನಡೆದ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಣ್ಣಿಗೇರಿ ತಾಲೂಕು ಘಟಕವು ತಾಲೂಕು ದಂಡಾಧಿಕಾರಿ ಮಂಜುನಾಥ ಅಮಾಸೆ ಅವರಿಗೆ ಮನವಿ ಸಲ್ಲಿಸಿದೆ.
ಏನಿದು ಪ್ರಕರಣ?
2009-10ರಲ್ಲಿ ಬಾರಿ ಪ್ರವಾಹ ಬಂದು ಬಸಾಪುರ ಗ್ರಾಮ ಜಲಾವೃತಗೊಂಡಿತ್ತು. ಈ ಹಿನ್ನೆಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಮಿತಿಯ ಧರ್ಮದರ್ಶಿಗಳಾದ ವೀರೇಂದ್ರ ಹೆಗಡೆ ಅವರ ನೆರವಿನ ಹಸ್ತದಿಂದ ಬಸಾಪುರ ಗ್ರಾಮವನ್ನು ಸ್ಥಳಾಂತರ ಮಾಡಲಾಗಿದೆ. ಸುಮಾರು 35 ಎಕರೆ ಜಮೀನು ಖರೀದಿಸಿ ಸುಮಾರು 340 ನಿವೇಶನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು.
Kshetra Samachara
09/03/2022 01:26 pm