ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತಹಶೀಲ್ದಾರ ವಿರುದ್ಧ ದೂರು ಕೊಟ್ಟವನ ಮೇಲೆ ಹಲ್ಲೆ

ಧಾರವಾಡ: ಪ್ರವಾಹ ಪೀಡಿತ ಬಡವರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ನವಲಗುಂದ ತಹಶೀಲ್ದಾರ ನವೀನ್ ಹುಲ್ಲೂರ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನವಲಗುಂದ ತಾಲೂಕಿನ ಬಸಾಪುರ ಗ್ರಾಮದ ಯುವಕ ಗಂಗಾಧರ ತೊರವಿ ಎಂಬಾತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ನಿನ್ನೆಯಷ್ಟೇ ಸಾಕ್ಷಿ ಸಹಿ ಮಾಡಿಸಿ ಹೋಗಿದ್ದರು. ಇದೇ ವಿಷಯವಾಗಿ ಇಂದು ಅವರ ಮೇಲೆ ನಾಲ್ಕೈದು ಜನ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

2009-10ನೇ ಸಾಲಿನಲ್ಲಿ ಪ್ರವಾಹ ಉಂಟಾಗಿದ್ದರಿಂದ ಬಸಾಪುರ ಗ್ರಾಮವನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಜಾಗ ಬಿಟ್ಟು ಬೇರೆಡೆ 370 ಮನೆಗಳನ್ನು ನಿರ್ಮಿಸಲಾಗಿತ್ತು. ಆ ಮನೆಗಳನ್ನು ಹಂಚಿಕೆ ಕೂಡ ಮಾಡಲಾಗಿದೆ. ಆದರೆ, 250 ಖಾಲಿ ನಿವೇಶನಗಳ ಹಂಚಿಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಅರ್ಹರಿಗೆ ಆ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡದೇ ದುಡ್ಡು ಕೊಟ್ಟವರಿಗೆ ಮಾತ್ರ ತಹಶೀಲ್ದಾರ ನವೀನ್ ಹುಲ್ಲೂರ ಅವರು ಅವುಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗಂಗಾಧರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಇಂದು ಲೋಕಾಯುಕ್ತಕ್ಕೆ ಯಾಕೆ ದೂರು ಸಲ್ಲಿಸಿದ್ದೀಯಾ ಅಂತಾ ನಾಲ್ಕೈದು ಜನ ಸೇರಿಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರಂತೆ. ಈ ಸಂಬಂಧ ಗಂಗಾಧರ ಪೊಲೀಸ್ ಠಾಣೆಗೆ ದೂರು ಕೊಡಲು ಸಹ ಮುಂದಾಗಿದ್ದಾರೆ.

ಸದ್ಯ ಹಲ್ಲೆಗೊಳಗಾಗಿರುವ ಗಂಗಾಧರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಈ ಪ್ರಕರಣವನ್ನು ಯಾವ ರೀತಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

06/03/2022 07:50 pm

Cinque Terre

73.48 K

Cinque Terre

10

ಸಂಬಂಧಿತ ಸುದ್ದಿ