ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಾಡಹಗಲೇ ಪಿಸ್ತೂಲ್ ಹೊರತೆಗೆದ ಬಿಜೆಪಿ ಮುಖಂಡ: ದೂರು ದಾಖಲು

ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳದಲ್ಲಿ ಬಿಜೆಪಿ ಮುಖಂಡ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದಲ್ಲಿ ನಡೆದಿದೆ.

ನಾಗಪ್ಪ ಗಾಣಿಗೇರ ಎಂಬಾತ ಮಡಿವಾಳೆಪ್ಪ ಬೆಳವಲದ ಎಂಬಾತನಿಗೆ ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದಾರೆ. ಈ ಕುರಿತು ಗರಗ ಠಾಣೆಗೆ‌ ಮಡಿವಾಳೆಪ್ಪ ದೂರು ನೀಡಿದ್ದಾರೆ. ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್​​ನಿಂದ ಹೊಡೆಯಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಗ್ ರೈಸ್ ಅಂಗಡಿ ಇಡುವ ಸಂಬಂಧ ನಾಗಪ್ಪ ಮತ್ತು ಮಲಿಕ್ ಎಂಬುವರ ನಡುವೆ ಈ ಜಗಳ ನಡೆದಿತ್ತು. ಈ ಜಗಳ ಬಿಡಿಸಲು ಮಡಿವಾಳಪ್ಪ ಮಧ್ಯೆ ಪ್ರವೇಶಿಸಿದ್ದರು. ಇದರಿಂದ ಕುಪಿತನಾದ ನಾಗಪ್ಪ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ಗರಗ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Edited By : Shivu K
Kshetra Samachara

Kshetra Samachara

02/02/2022 10:51 pm

Cinque Terre

75.35 K

Cinque Terre

51

ಸಂಬಂಧಿತ ಸುದ್ದಿ