ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಭೆಯಲ್ಲಿ ಶಾಸಕರ ಗಲಾಟೆ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಜಗಳ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ಗಲಾಟೆ ತಾರಕಕ್ಕೆ ಏರಿದೆ. ಶಾಸಕರ ನಡುವಿನ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆಯೊಂದು ಹುಬ್ಬಳ್ಳಿಯ ಖಾಸಗಿ ಹೊಟೇಲನಲ್ಲಿ ನಡೆದಿದೆ.

ಬಿಜೆಪಿ ಶಾಸಕ ಮತ್ತು ಎಂಎಲ್ ಸಿ ಗಳ ನಡುವೆ ಗಲಾಟೆ ನಡೆದಿದ್ದು, ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್.ಶಂಕರ್ ನಡುವೆ ಗಲಾಟೆ ಏರ್ಪಟ್ಟಿತು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಶುರುವಾದ ಗಲಾಟೆ ಪ್ರಾರಂಭವಾಗಿದೆ.

ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಗಲಾಟೆ ಶುರುವಾಗಿದೆ.ಶಾಸಕ ಅರುಣಕುಮಾರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.ಇನ್ನೂ ಉಭಯ ಶಾಸಕರ ಗಲಾಟೆ ತಾರಕಕ್ಕೆ ಏರಿದೆ.

Edited By : Manjunath H D
Kshetra Samachara

Kshetra Samachara

01/12/2021 12:33 pm

Cinque Terre

43.04 K

Cinque Terre

11

ಸಂಬಂಧಿತ ಸುದ್ದಿ