ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಬೆಂಬಲಿಗರಿಂದ ಶಿಕ್ಷಕರಿಗೆ ಧಮ್ಕಿ

ಧಾರವಾಡ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬೆಂಬಲಿಗರು ಶಿಕ್ಷಕರೊಬ್ಬರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಶಿಕ್ಷಕನಿಗೆ ಹೊರಟ್ಟಿ ಬೆಂಬಲಿಗರೊಬ್ಬರು ಧಮ್ಕಿ ಹಾಕಿರುವ ಆಡಿಯೋ ಸಂಭಾಷಣೆ ಕೂಡ ಲಭ್ಯವಾಗಿದೆ.

ಹೌದು! ಶಿಕ್ಷಕರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುವ ಹೊರಟ್ಟಿ ಅವರ ವಿರುದ್ಧ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಹುಟ್ಟಿಕೊಂಡಿದ್ದೇ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎಂಬುದು ಗೊತ್ತಾಗಿದೆ.

ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಕೋಶಾಧ್ಯಕ್ಷ ಆರ್.ಎಚ್.ಪಾಟೀಲ ಅವರ ಮನೆಗೆ ಬಂದ ಜೆಡಿಎಸ್ ಮುಖಂಡ ಗಜಾನನ ಅಣ್ವೇಕರ ಹಾಗೂ ಇತರರು, ಹೊರಟ್ಟಿ ಅವರ ವಿರುದ್ಧ ಸಂಘ ಕಟ್ಟಿಕೊಂಡು ಚುನಾವಣೆಯಲ್ಲಿ ಅವರ ವಿರುದ್ಧ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೀರಿ. ಸಂಘವನ್ನು ಬಂದ್ ಮಾಡಬೇಕು ಇಲ್ಲದೇ ಹೋದರೆ ನಿಮ್ಮನ್ನು ಮನೆಯಲ್ಲೇ ನೇತು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಧಮ್ಕಿಯನ್ನೂ ಹಾಕಿದ್ದಾರೆ ಎಂದು ಸ್ವತಃ ಆರ್.ಎಚ್.ಪಾಟೀಲ ಆರೋಪಿಸಿದರು.

ರಾತ್ರೋರಾತ್ರಿ ಮನೆಗೆ ಬಂದ ಅಣ್ವೇಕರ ಹಾಗೂ ಇತರರು ಹೊರಟ್ಟಿ ಅವರೊಂದಿಗೂ ಫೋನಿನಲ್ಲಿ ಮಾತನಾಡಿಸಿದ್ದಾರೆ. ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಅಲ್ಲಿ ಜಾಮೀನು ಪಡೆದ ಅಣ್ವೇಕರ, ಸಂಘದ ಪದಾಧಿಕಾರಿ ಎಸ್.ಎನ್.ಗಡದಿನ್ನಿ ಎಂಬ ಶಿಕ್ಷಕರು ಸೇವೆ ಸಲ್ಲಿಸುತ್ತಿರುವ ಲೆಮಿಂಗ್ಟನ್ ಪ್ರೌಢ ಶಾಲೆಗೆ ಹೋಗಿ ಅವರಿಗೂ ಧಮ್ಕಿ ಹಾಕಿದ್ದಾನೆ ಎಂದು ಆರೋಪಿಸಿರುವ ಶಿಕ್ಷಕರು, ತಮಗೆ ರಕ್ಷಣೆ ನೀಡಬೇಕು ಹಾಗೂ ಧಮ್ಕಿ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇನ್ನು ಶಿಕ್ಷಕರಾದ ಆರ್.ಎಚ್.ಪಾಟೀಲ ಅವರೊಂದಿಗೆ ದೂರವಾಣಿಯಲ್ಲಿ ಗಜಾನನ ಅಣ್ವೇಕರ ಎನ್ನುವವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲೇನಿದೆ ಎಂದು ಕೇಳಿ ನೋಡಿ.

ಒಟ್ಟಾರೆಯಾಗಿ ಬಸವರಾಜ ಹೊರಟ್ಟಿ ಬೆಂಬಲಿಗರೇ ಈ ರೀತಿ ಶಿಕ್ಷಕರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸ್ವತಃ ಹೊರಟ್ಟಿ ಅವರೇ ಇದಕ್ಕೆ ಸ್ಪಷ್ಟನೆ ನೀಡಬೇಕಾಗಿದೆ. ಅಲ್ಲದೇ ಪೊಲೀಸರು ಈ ಪ್ರಕರಣವನ್ನು ಯಾವ ರೀತಿ ಪರಿಗಣನೆಗೆ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

13/11/2021 06:54 pm

Cinque Terre

83.04 K

Cinque Terre

5

ಸಂಬಂಧಿತ ಸುದ್ದಿ