ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೊರಟ್ಟಿ ವಿರುದ್ಧ ಕೆಲಸ ಮಾಡಿದ್ರೆ ಜೀವ ಸಮೇತ ಉಳಿಸಲ್ಲ! ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿದ ಜೆಡಿಎಸ್ ಮುಖಂಡ

ಹುಬ್ಬಳ್ಳಿ- ಅವರೆಲ್ಲಾ ಶಿಕ್ಷಕರು ಸಾವಿರಾರು ಮಕ್ಕಳಿಗೆ ಪಾಠ ಬೋಧನೆ ಮಾಡಿ ಸರಿಯಾದ ದಾರಿಗೆ ತಂದವರು, ಈಗ ಅಂತಹ ಶಿಕ್ಷಕರಿಗೆ ಜೀವ ಬೆದರಿಕೆ ಬಂದಿರುವ ಆರೋಪ ಕೇಳಿ ಬರುತ್ತಿದೆ.

ಹೌದು,,, ಹೀಗೆ ಕಣ್ಣೀರು ಹಾಕುತ್ತ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವ ಇವರ ಹೆಸರು ಆರ್.ಎಫ್ ಪಾಟೀಲ್ ವೃತ್ತಿಯಲ್ಲಿ ಶಿಕ್ಷಕರು. ಕರ್ನಾಟಕ ರಾಜ್ಯ ಶಿಕ್ಷಣಸಂಸ್ಥೆಗಳ ನೌಕರರ ಸಂಘದ ಖಜಾಂಚಿಯೂ ಕೂಡ. ಈ ಸಂಘ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಕರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಸತತವಾಗಿ ಹೋರಾಟ ಮಾಡುತ್ತಾ ಬಂದಿದೆ. ಸಂಘದ ಖಜಾಂಚಿಯಾದ ಆರ್.ಎಫ್ ಪಾಟೀಲ ಎಂಬುವವರ ಮೇಲೆ, ಅಕ್ಟೋಬರ್ 16 ರಂದು ರಾತ್ರಿ 8.40 ಕ್ಕೆ ಜೆಡಿಎಸ್ ಪಕ್ಷದ ಮುಖಂಡ ಗಜಾನನ ಅಣ್ವೇಕರ್ ಎಂಬುವವರು, ತನ್ನ ಜೊತೆಗೆ ಇಬ್ಬರನ್ನೂ ಕರೆದುಕೊಂಡು ಬಂದು, ಏಕಾಏಕಿ ಮನೆಗೆ ನುಗ್ಗಿ, ವಿಧಾನ ಪರಿಷತ್ ಸದಸ್ಯ, ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಯಾವುದೇ ಕೆಲಸ ಮಾಡಬೇಡಾ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಲ್ಲದೇ ಪ್ರಾಣ ಬೆದರಿಕೆ ಹಾಕಿದ್ದಾರೆಂದು ನಗರದ ಅಶೋಕನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಶಿಕ್ಷಕರು ಆರೋಪ ಮಾಡಿದ್ದಾರೆ.

ಜೆಡಿಎಸ್ ಮುಖಂಡ ಗಜಾನನ ಅಣ್ವೇಕರ್ ಮನೆಗೆ ನುಗ್ಗಿ ಅವಾಜ್ ಹಾಕಿದ್ದಲ್ಲದೆ, ಶಿಕ್ಷಕ ಪಾಟೀಲ್ ಅವರಿಗೆ ಕರೆ ಮಾಡಿ ಇದು ಸ್ಯಾಂಪಲ್ ಅಷ್ಟೇ, ಇನ್ನೂ ಮುಂದೆ ಹೋದರೆ ಬೇರೆನೇ ಆಗುತ್ತೆ ಎಂದು ಅವಾಜ್ ಹಾಕಿರುವ ಆಡಿಯೋ ಇಲ್ಲಿದೆ ಕೇಳಿ..

ಕೂಡಲೆ ತಪ್ಪಿತಸ್ಥ ಆರೋಪಿಗಳ ವಿರುದ್ಧ ಪ್ರಮಾಣಿಕವಾಗಿ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು, ಇಲ್ಲದಿದ್ದಲ್ಲಿ ಸಂಘದ ವತಿಯಿಂದ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ವಿಷಯದ ಬಗ್ಗೆ ಗಮನ ಹರಿಸಿ, ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕೆಂದು ಎಲ್ಲರ ಒತ್ತಾಯವಾಗಿದೆ.

Edited By : Nagesh Gaonkar
Kshetra Samachara

Kshetra Samachara

20/10/2021 04:08 pm

Cinque Terre

70.07 K

Cinque Terre

6

ಸಂಬಂಧಿತ ಸುದ್ದಿ