ಹುಬ್ಬಳ್ಳಿ : ಕಳೆದ ಶನಿವಾರ ಸೆ. 18 ರಂದು ಇಲ್ಲಿಯ ಮಾಧವನಗರದ ದರಗಾ ಓಣಿಯ ಸಭೆಯೊಂದರಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್ ಪ್ರಫುಲಚಂದ್ರ ಕೆ. ರಾಯನಗೌಡ್ರ ವಿರುದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರಲ್ಲದೆ, ಸೆ. 23 ರಂದು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದ್ದಾರೆ.
ಅಶೋಕ ನಗರ ಠಾಣೆಯ ಎಎಸ್ಐ ಮನೋಹರ್ ಕೆ. ದೇಸಾಯಿ ಎಂಬವರು ಖುದ್ದಾಗಿ ದೂರು ಸಲ್ಲಿಸಿದ್ದರು.
ಎಫ್ಐಆರ್ ದಲ್ಲಿರುವ ಯಥಾವತ್ ವಿವರ ಈ ಕೆಳಗಿನಂತಿದೆ.
" ದಿ.23 ರಂದು ತಾವು (ಫಿರ್ಯಾದುದಾರರಾದ ASI ದೇಸಾಯಿ) ಠಾಣಾ ವ್ಯಾಪ್ತಿ ಮಾಧವ ನಗರದಲ್ಲಿ ಪೆಟ್ರೊಲಿಂಗ್ ದಲ್ಲಿದ್ದಾಗ ಅಲ್ಲಿನ ಪೊಲೀಸ್ ಬಾತ್ಮೀದಾರರ ಮೋಬೈಲ್ ವಾಟ್ಸಪ್ ಗೆ ಒಂದು ವಿಡಿಯೋ ಬಂದ್ದಿದ್ದು,ಅದನ್ನು ನೋಡಲಾಗಿ ಅದರಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರಫುಲಚಂದ್ರ ರಾಯನಗೌಡ್ರ ಎಂಬವರು ಮಾಧನಗರ ದರ್ಗಾ ಓಣಿಯಲ್ಲಿ ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ಒಂದು ಸಭೆಯನ್ನು ನಡೆಸಿ, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ " ನೀವು ಯಾರಿಗೂ ಹೆದರಬೇಡಿ, ಯಾವ ಮಗಾ ಏನಾದರೂ ಅಂದ್ರ ನನ್ನ ಹತ್ರ ಬನ್ನಿ, ನಾ ಅದೇನಿ ನಿಮ್ಮ ಹಿಂದ ಬೇಕಾದ್ದ ಆಗಲಿ ನೋಡೋನ ಯಾಂವ ಏನ್ಮಾಡ್ತಾನಂತ, ಯಾವ ಮಗಾ ಏನಾರ ಕುಂಞ ಅಂದ್ರ... ಅವ್ರುಗೆ ಹೊಡದ ಬಂದ ನನಗ ಹೇಳ್ರಿ ನಾನ್ ನೋಡಕೋಳ್ತೇನಿ ಅಂತಾ ಉದ್ದೇಶಪೂರ್ವಕವಾಗಿ ಸಾರ್ವಜನಿಕರನ್ನು ಉದ್ರೇಕಿಸಿ ಮಾತನಾಡಿಸಿದರೆ ದೊಂಬಿ ನಡೆಯುವ ಸಂಭವ ಇದೆ ಎಂದು ತಿಳಿದೂ ಪ್ರಚೋದನಾಕಾರಿ ಭಾಷಣವನ್ನು ಮಾಡಿ ಜನರಲ್ಲಿ ದ್ವೇಷದ ಭಾವನೆ ಬಿತ್ತಿದ ಅಪರಾಧ".
Kshetra Samachara
25/09/2021 05:08 pm