ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವರ್ಕರ್ ಫೋಟೋ ಸುಟ್ಟ ಕಾಂಗ್ರೆಸ್‌ನ 12 ಜನರ ಮೇಲೆ ಎಫ್‌ಐಆರ್

ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಫೋಟೋ ಸುಟ್ಟ ಕಾಂಗ್ರೆಸ್‌ನ 12 ಜನ ಕಾರ್ಯಕರ್ತರ ಮೇಲೆ ಉಪನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅರವಿಂದ ಏಗನಗೌಡರ, ಮೈನುದ್ದೀನ್ ನದಾಫ್, ಮನೋಜ ಕರ್ಜಗಿ, ರಾಬರ್ಟ್ ದದ್ದಾಪುರಿ, ಸಂಗನಮುಲ್ಲಾ, ಆಸೀಫ್ ಸನದಿ, ಅಲ್ತಾಫ್ ಹುಲ್ಲೂರ, ಅನೀಲಕುಮಾರ ಪಾಟೀಲ, ಆನಂದ ಸಿಂಗನಾಥ್, ನಾಗರಾಜ ಗೌರಿ, ಸೂರಜ್ ಪುಡಕಲಕಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರ ಕಾರ್ಯಕರ್ತರ ಮೇಲೆ ಬಜರಂಗದಳದ ಮುಖ್ಯಸ್ಥ ಶಿವಾನಂದ ಸತ್ತಿಗೇರಿ ದೂರು ದಾಖಲಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವೀರ ಸಾವರ್ಕರ್ ಅವರ ಫೋಟೋ ಸುಟ್ಟಿದ್ದರು. ಇದನ್ನು ಖಂಡಿಸಿ ಬಜರಂಗದಳ ಸೇರಿದಂತೆ ಇತರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಯವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಅವರ ಮೇಲೆ ದೂರು ದಾಖಲಿಸಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/08/2022 01:09 pm

Cinque Terre

64.05 K

Cinque Terre

21

ಸಂಬಂಧಿತ ಸುದ್ದಿ