ಹುಬ್ಬಳ್ಳಿ: ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಬೇರೆ ಬೇರೆ ಸಂಘಟನೆಯವರು. ಆಗ ನನಗೂ ಕೂಡ ಗಾಯಗಳಾಗಿವೆ. ನಾನು ಯಾವುದೇ ಕಾರಣಕ್ಕೂ ಕೋಮುಗಲಭೆ ಸೃಷ್ಟಿಸುವ, ಪ್ರಚೋದಿಸುವ ಅಥವಾ ದೇಶ ದ್ರೋಹದ ಕೆಲಸವನ್ನು ಮಾಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಸ್ಪಷ್ಟಪಡಿಸಿದ್ದಾರೆ.
ಗಲಾಟೆಯ ಪ್ರಚೋದನೆ ವೀಡಿಯೋ ವೈರಲ್ ಅಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಪ್ರಚೋದನೆ ಮಾಡುತ್ತಿರಲಿಲ್ಲ, ನಮ್ಮ ಜನರನ್ನ ಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಜನರಿಗೆ ಧ್ವನಿ ಕೇಳುತ್ತದೆ ಎನ್ನುವ ಕಾರಣಕ್ಕೆ ಪೊಲೀಸ್ ವಾಹನ ಏರಿದ್ದೆ. ಗಲಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಸ್ಥಳೀಯರಲ್ಲ ಎಂದರು.
ಇನ್ನೂ ಗಲಾಟೆ ಮಾಡಿದವರ ಬಗ್ಗೆ ನನಗೆ ಗೊತ್ತಿರುವಷ್ಟು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದೇನೆ. ನಮಗೆ ಶಾಂತಿ ಸೌಹಾರ್ದತೆ ಮುಖ್ಯವಾಗಿದೆ. ನಾನು ಯಾವುದೇ ಕಾರಣಕ್ಕೂ ಪ್ರಚೋದನೆ ನೀಡಿಲ್ಲ ಎಂದು ಅಲ್ತಾಫ್ ಹಳ್ಳೂರ ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 01:13 pm