ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗೀಶ್ ಹತ್ಯೆಗೆ ವೈಯಕ್ತಿಕ ಹಾಗೂ ರಾಜಕೀಯ ದ್ವೇಷವೇ ಕಾರಣ

ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆಗೆ ವೈಯಕ್ತಿಕ ಹಾಗೂ ರಾಜಕೀಯ ದ್ವೇಷವೇ ಕಾರಣ ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜಶೀಟ್ ನಲ್ಲಿ ಹೇಳಿದೆ.ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಸಲ್ಲಿಸಿದ್ದ ಸಪ್ಲಿಮೆಂಟರಿ ಚಾರ್ಜ ಶೀಟ್ ಪ್ರತಿ ಲಭ್ಯವಾಗಿದ್ದು, ಅದರಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮೇಲಿನ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

ಸಿಬಿಐಗೂ ಮೊದಲು ನಡೆದ ಪೊಲೀಸ್ ತನಿಖೆಯಲ್ಲಿ ಓರ್ವನನ್ನು ಬಿಟ್ಟಿರುವುದು ಸಿಬಿಐ ಗಮನಕ್ಕೆ ಬಂದಿತ್ತು. ಸಿಬಿಐ ತನಿಖೆ ಆರಂಭದ ಬಳಿಕ ಮತ್ತಷ್ಟು ಜನರನ್ನು ಬಂಧಿಸಿದ್ದೇವೆ. ವಿನಯ್​ ಕುಲಕರ್ಣಿಯನ್ನು ನ. 5 ರ 2020 ರಂದು ಕೊಲೆ ಪ್ರಕರಣದ 15 ನೇ ಆರೋಪಿಯಾಗಿ ಬಂಧಿಸಲಾಗಿತ್ತು. ಯೋಗೀಶಗೌಡ ಮತ್ತು ವಿನಯ್ ನಡುವೆ ವೈಯಕ್ತಿಕ ದ್ವೇಷ, ರಾಜಕೀಯ ಪೈಪೋಟಿ ನಡೆದಿತ್ತು. ಈ ನಡುವೆ ಯೋಗೀಶಗೌಡ ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದರು. ವಿಚಾರ ತಿಳಿದ ವಿನಯ್​ ಕುಲಕರ್ಣಿ, ಚುನಾವಣೆಯಿಂದ ಹಿಂದೆ ಸರಿಯುವಂತೆ ಯೋಗೀಶ್​​ ಸಹೋದರ ಗುರುನಾಥನಿಗೆ ವಿನಯ್​​ ಕುಲಕರ್ಣಿ ಹೇಳಿದ್ದರು. ಆದರೂ ಯೋಗೀಶ್​​ ಚುನಾವಣೆಗೆ ಸ್ಪರ್ಧಿಸಿದ್ದರು. ಇದರಿಂದ ಕೋಪಗೊಂಡ ವಿನಯ್, ಯೋಗೀಶನನ್ನು ಅರೆಸ್ಟ್ ಮಾಡಿಸಿದ್ದರು. ತದ ನಂತರ 23 ಏಪ್ರೀಲ್ 2016 ರಂದು ನಡೆದ ಜಿಪಂ ಸಭೆಯಲ್ಲಿ ಇಬ್ಬರ ಮಧ್ಯೆ ವಾದ-ವಾಗ್ವಾದ ನಡೆದಿತ್ತು. ಇದೇ ದ್ವೇಷ ಮುಂದುವರೆಸಿದ ವಿನಯ್, ಯೋಗೀಶಗೌಡ ಕೊಲೆ ಮಾಡಿಸಿದ್ದರು. ಇದಕ್ಕೆ ಬಸವರಾಜ ಮುತ್ತಗಿ ಮತ್ತು ವಿನಯ್​​ ಸೋದರ ಮಾವ ಚಂದ್ರಶೇಖರ ಇಂಡಿ ಎಂಬುವವರನ್ನು ಬಳಿಸಿಕೊಂಡಿದ್ದರು ಎಂದು ಚಾರ್ಜಶೀಟ್ ನಲ್ಲಿ ತಿಳಿಸಲಾಗಿದೆ.

ಈ ನಡುವೆ 2016ರ ಮೇ 24 ರಂದೇ ಜಮೀನು ವಿವಾದ ಮುಗಿದು ಹೋಗಿತ್ತು. ಆದರೂ ಮುತ್ತಗಿ ಮತ್ತು ನಾಗೇಂದ್ರ ತೋಡಕರ ಎಂಬುವವರ ಮಧ್ಯದ ವಿವಾದವನ್ನು ವಿಚಾರಣೆ ವೇಳೆ ಎಳೆದು ತರಲಾಗಿತ್ತು. ಇದು ಕೊಲೆ ಕೇಸ್​​​​ನ ದಿಕ್ಕು ಬದಲಿಸುವುದಕ್ಕೆ ಜಮೀನು ವಿವಾದವನ್ನು ವಿಚಾರಣೆ ಮಧ್ಯೆ ಎಳೆದು ತರಲಾಗಿತ್ತು ಎಂಬುದನ್ನು ಸಿಬಿಐ ಚಾರ್ಜ್​ಶೀಟ್​ನಲ್ಲಿ ದಾಖಲಿಸಿದೆ. ಬಸವರಾಜ ಮುತ್ತಗಿ ಜೊತೆಗೆ ವಿನಯ್​​​ ಕುಲಕರ್ಣಿ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದರು. ಹತ್ಯೆ ಸಂಬಂಧ ವಿನಯ್​​ ಮೊಬೈಲ್ ಸಂಖ್ಯೆ 9663406677 ರಿಂದ ಮುತ್ತಗಿ ನಂಬರ್ 9538659906 ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ. 2016ರ ಜನೆವರಿಯಿಂದ ಜೂನ್​​ವರೆಗೆ ವಿನಯ್​​​ ಕುಲಕರ್ಣಿ ಮುತ್ತಗಿಯೊಂದಿಗೆ ನಿರಂತರ ಫೋನ್ ಸಂಪರ್ಕದಲಿದ್ದರು. ಈ ಅವಧಿಯಲ್ಲಿ ಇಬ್ಬರು ಒಟ್ಟು 57 ಬಾರಿ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವಿನಯ್​​ ಕುಲಕರ್ಣಿ ಪತ್ನಿ ಮೊಬೈಲ್‌ನಲ್ಲಿಯೂ ಮಾತುಕತೆ ನಡೆದಿದ್ದು, ಯೋಗೀಶ ಕೊಲೆಗೆ ಸಂಬಂಧಿಸಿದಂತೆ 2016ರ ಏಪ್ರಿಲ್ 23ರಿಂದ ಅದೇ ವರ್ಷದ ಮೇ 31ರವರೆಗೆ ಮುತ್ತಗಿಯನ್ನು ವಿನಯ್​ ಅನೇಕ ಸಲ ಭೇಟಿ ಮಾಡಿದ್ದರು. ಬೇರೆ ಬೇರೆ ಮೊಬೈಲ್ ಬಳಸಿ ಮುತ್ತಗಿ ಮತ್ತು ವಿನಯ್​​ ಮಾತುಕತೆ ನಡೆಸಿ ಹತ್ಯೆ ಸ್ಕೆಚ್​​​ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು. ಯೋಗೀಶಗೌಡ ಕೊಲೆ ಮಾಡಲು 3 ಕಂಟ್ರಿ ಪಿಸ್ತೂಲ್​ಗಳ ವ್ಯವಸ್ಥೆಯನ್ನು ವಿನಯ್​​​ ಸೋದರ ಮಾವ ಚಂದ್ರಶೇಖರ ಇಂಡಿ ಮಾಡಿದ್ದರು. ‌ಬಸವರಾಜ ಮುತ್ತಗಿಗೆ ಕಂಟ್ರಿ ಪಿಸ್ತೂಲ್ ಹಸ್ತಾಂತರ ಮಾಡಿ ಕೊಲೆಗೆ ಮಾರಕಾಸ್ತ್ರಗಳನ್ನೂ ಸಹ ನೀಡಿದ್ದರು. ಶಿವಾನಂದ ಬಿರಾದಾರ ಮೂಲಕ ಹಂತಕರು ಕಂಟ್ರಿ ಪಿಸ್ತೂಲ್ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಇವರಿಗೆ ದಾಂಡೇಲಿ ಹಾರ್ನ್​​ ಬಿಲ್ ರೆಸಾರ್ಟ್‌ನಲ್ಲಿ ತಂಗಲು ವಿನಯ್​​ ಕುಲಕರ್ಣಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸಿದ್ದರು. ಈ ಕುರಿತಂತೆ ರೆಸಾರ್ಟ್ ಮಾಲೀಕರು ಮಾಹಿತಿ ನೀಡಿದ್ದಾರೆ. ಮೊದಲ ಸಲ ಹತ್ಯೆ ಯತ್ನಕ್ಕೆ ಬಂದಾಗ ರೆಸಾರ್ಟ್​​​ನಲ್ಲಿ ಹಂತಕರು ತಂಗಿದ್ದರು.

ಮೊದಲ ಹತ್ಯೆ ಯತ್ನದ ಬಳಿಕ ವಿನಯ್​​ ಕುಲಕರ್ಣಿ ಮುತ್ತಗಿಗೆ 6 ಲಕ್ಷ ರೂಪಾಯಿಗಳನ್ನು ತನ್ನ ಡೈರಿಯಲ್ಲಿ ನೀಡಿದ್ದರು. ‌ಹಂತಕರಿಗೆ ಉಳಿದುಕೊಳ್ಳಲು ಧಾರವಾಡದ ಹೋಟೆಲ್ ಅಂಕಿತಾ ಮತ್ತು ಸೆಂಟ್ರಲ್ ಪಾರ್ಕ್‌ನಲ್ಲಿ ವ್ಯವಸ್ಥೆ‌ ಮಾಡಲಾಗಿತ್ತು ಎಂದು ಸಿಬಿಐ ಪೂರಕ ಚಾರ್ಜ್ ಶೀಟ್​​ನಲ್ಲಿ ನಮೂದಿಸಿದೆ.

Edited By : Nirmala Aralikatti
Kshetra Samachara

Kshetra Samachara

10/02/2021 03:16 pm

Cinque Terre

55.05 K

Cinque Terre

1

ಸಂಬಂಧಿತ ಸುದ್ದಿ