ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಲಭೆ ಪ್ರಕರಣದಲ್ಲಿ 115 ಜನ ಅರೆಸ್ಟ್; 200ಕ್ಕೂ ಹೆಚ್ಚು ಜನರ ವಿಚಾರಣೆ

ಹುಬ್ಬಳ್ಳಿ:ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಇಲ್ಲಿಯವರೆಗೆ 115 ಜನರ ಬಂಧನ ಮಾಡಿರುವ ಪೊಲೀಸರು ಮತ್ತಷ್ಟು ಗಲಭೆಕೋರರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಹೌದು.. ಹುಬ್ಬಳ್ಳಿಯಲ್ಲಿ ಪೊಲೀಸರನ್ನೇ ಗುರಿಯಾಗಿಸಿಕೊಂಡು ದಾಂಧಲೆ ಮಾಡಿದ್ದ ಪುಂಡರನ್ನು ಈಗ ಹೆಡೆಮುರಿ ಕಟ್ಟಲಾಗುತ್ತಿದೆ. ಈ ಹಿನ್ನೆಲೆ ಮೊನ್ನೆ ರಾತ್ರಿಯಿಂದಲೇ ಪೊಲೀಸರಿಂದ ಕಾರ್ಯಾಚರಣೆ ನಡೆಸುತ್ತಿದ್ದು, 200ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದರಲ್ಲಿ ಇದೀಗ 115 ಜನರು ಅರೆಸ್ಟ್ ಕೂಡ ಮಾಡಲಾಗಿದೆ.

ಸದ್ಯ ಗಲಭೆಗೆ ಕಾರಣರಾದ ಮತ್ತಷ್ಟು ಗಲಭೆಕೋರರಿಗೆ ಬಲೆ ಬೀಸಿರುವ ಪೊಲೀಸರು ಕೂಡಲೇ ಗಲಾಟೆ ಮಾಡಿದವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಬಿಸಿ ಮುಟ್ಟಿಸಲಿದೆ.

Edited By :
Kshetra Samachara

Kshetra Samachara

20/04/2022 11:33 am

Cinque Terre

50.16 K

Cinque Terre

8

ಸಂಬಂಧಿತ ಸುದ್ದಿ