ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರ್ತಡೇನೂ ಆಗಲಿಲ್ಲ: ಬೆಳಕಿನ ಹಬ್ಬಕ್ಕೂ ಬಿಡಲಿಲ್ಲ

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಳಕಿನ ಹಬ್ಬ ದೀಪಾವಳಿಗೂ ರಿಲೀಫ್ ಸಿಗದಂತಾಗಿದೆ.

ಹೌದು! ಇಂದು ವೀಡಿಯೋ ಕಾನ್ಫರನ್ಸ್ ಮೂಲಕ ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯದ ಎದುರು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಹಾಜರುಪಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನ.23 ರವರೆಗೆ ಅಂದರೆ ಇಂದಿನಿಂದ 14 ದಿನಗಳ ಕಾಲ ವಿನಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಮೂರು ದಿನಗಳ ಸಿಬಿಐ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಧಾರವಾಡದ 2ನೇ ಹೆಚ್ಚುವರಿ ನ್ಯಾಯಾಲಯದ ಎದುರು ವಿನಯ್ ಅವರನ್ನು ಹಾಜರುಪಡಿಸಬೇಕಾಗಿತ್ತು.

ವಿನಯ್ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಅವಾಂತರದಿಂದಾಗಿ ಕೊನೆ ಕ್ಷಣದಲ್ಲಿ ಸಿಬಿಐ ಅಧಿಕಾರಿಗಳು ವೀಡಿಯೋ ಕಾನ್ಫರನ್ಸ್ ಮೂಲಕ ವಿನಯ್ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದರು.

ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಿನಯ್ ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಸಿಬಿಐ ಅರ್ಜಿ ಸಲ್ಲಿಸಿರಲಿಲ್ಲ. ವಿನಯ್ ಪರ ವಕೀಲರೂ ಜಾಮೀನು ಕೋರಿ ಅರ್ಜಿಯನ್ನೂ ದಾಖಲಿಸಿರಲಿಲ್ಲ.

ಹೀಗಾಗಿ ನ್ಯಾಯಾಲಯ ನ.23ರ ವರೆಗೂ ವಿನಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಇದೇ ಶನಿವಾರ ಹಾಗೂ ಭಾನುವಾರ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಗುತ್ತಿದ್ದು, ಈ ಬೆಳಕಿನ ಹಬ್ಬವನ್ನು ಮಾಜಿ ಸಚಿವ ವಿನಯ್ ಕತ್ತಲಲ್ಲೇ ಆಚರಿಸುವಂತಾಗಿದೆ.

ಪ್ರತಿವರ್ಷ ತಮ್ಮದೇ ಒಡೆತನದ ವಿನಯ್ ಡೇರಿಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡುತ್ತಿದ್ದ ವಿನಯ್, ಈ ವರ್ಷ ಜೈಲಿನಲ್ಲಿ ದೀಪಾವಳಿ ಆಚರಣೆ ಮಾಡುವಂತಾಗಿದೆ.

Edited By : Nirmala Aralikatti
Kshetra Samachara

Kshetra Samachara

09/11/2020 01:46 pm

Cinque Terre

122.24 K

Cinque Terre

7

ಸಂಬಂಧಿತ ಸುದ್ದಿ