ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದಿದ್ದಾಗ ವಿನಯ ಅಣ್ಣಾ ಅಣ್ಣಾ ಅನ್ನೋದು, ಸೆಲ್ಫಿ ತಗೋಳೋದು ಬಿಟ್ಟು ಧಾರವಾಡಕ್ಕ ಬರ್ರಿ...!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ದ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ವಿಚಾರಣೆ ನಡೆಸಿ ಇಂದು ಧಾರವಾಡ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿರುವ ಹಿನ್ನೆಲೆಯಲ್ಲಿ ವಿನಯ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ ಕಾರ್ಯಕರ್ತರಿಗೆ ಆಗಮಿಸುವಂತೆ ಧ್ವನಿ ಸಂದೇಶದ ಮೂಲಕ ಆಹ್ವಾನಿಸಿದ್ದಾರೆ.

ಮೂರು ದಿನ ವಿಚಾರಣೆ ಬಳಿಕ ಹುಬ್ಬಳ್ಳಿಯಿಂದ ಧಾರವಾಡದ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಬರಬೇಕೆಂದು ಆಪ್ತ ಸಹಾಯಕ ಖಡಕ್ ಆಗಿ ಸಂದೇಶ ರವಾನೆ ಮಾಡಿದ್ದು,ಈಗ ಆ ಶ್ರವಣ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈಗಾಗಲೇ ಮೂರು ದಿನ ಸಿಬಿಐ ಕಸ್ಟಡಿಯಲ್ಲಿರುವ ವಿನಯ ಕುಲಕರ್ಣಿಯನ್ನು ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದು,ಉತ್ತರ ಕರ್ನಾಟಕ ಭಾಗದ‌ ಬಹುತೇಕ ಕಾರ್ಯಕರ್ತರು ಜಮಾವಣೆಗೊಳ್ಳುವ ಸಾಧ್ಯತೆ ಇದೆ.

Edited By : Manjunath H D
Kshetra Samachara

Kshetra Samachara

09/11/2020 11:16 am

Cinque Terre

72.75 K

Cinque Terre

15

ಸಂಬಂಧಿತ ಸುದ್ದಿ