ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಸಹಾಯಕನಾಗಿದ್ದ ಸೋಮಲಿಂಗ ನ್ಯಾಮಗೌಡ ಅವರ ಕಾರು ಚಾಲಕನಾಗಿದ್ದ ಪುಂಡಲೀಕ ಎನ್ನುವವರನ್ನು ಸಿಬಿಐ ಇಂದು ವಿಚಾರಣೆಗೊಳಪಡಿಸಿದೆ.ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರ ಪಾತ್ರ ಇದೆ ಎಂದು ಅವರ ಹೆಸರು ಬಲವಾಗಿ ಕೇಳಿ ಬಂದಿತ್ತು. ಸದ್ಯ ಸಿಬಿಐ ಅವರನ್ನು ಬಂಧಿಸಿದ್ದರೂ ಇನ್ನೂ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಸೋಮಲಿಂಗ ನ್ಯಾಮಗೌಡ ಅವರು ಎಪಿಎಂಸಿ ಜಂಟಿ ನಿರ್ದೇಶಕರಾಗಿದ್ದ ವೇಳೆ ಪುಂಡಲೀಕ ಗುತ್ತಿಗೆ ಆಧಾರದ ಮೇಲೆ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇದೀಗ ಆ ಕಾರು ಚಾಲಕನನ್ನೂ ಸಿಬಿಐ ಕರೆದು ವಿಚಾರಣೆಗೊಳಪಡಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
08/11/2020 03:11 pm