ಹುಬ್ಬಳ್ಳಿ:ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು,ಬಂಧಿತ ಆರೋಪಿಗಳ ಹೇಳಿಕೆ ವಿನಯ್ ಕುಲಕರ್ಣಿಗೆ ಮುಳುವಾಗಿದೆ.ಅಲ್ಲದೇ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರವನ್ನು ಎಳೆ ಎಳೆಯಾಗಿ ಸಿಬಿಐ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಹೌದು. ವಿನಯ ಕುಲಕರ್ಣಿಯವರು ಪ್ರಕರಣದಿಂದ ಪಾರಾಗಲು ಹಲವು ಸಾಕ್ಷ್ಯ ನಾಶಪಡಿಸಿದ್ದಾರೆ ಎಂಬ ವರದಿಯಲ್ಲಿ ಉಲ್ಲೇಖಿಸಿದ್ದು ಸಿಬಿಐ ಸಲ್ಲಿಸಿದ ಅಫಿಡವಿಟ್ ಪಬ್ಲಿಕ್ ನೆಕ್ಷ್ಟ್ ಗೆ ಲಭ್ಯವಾಗಿದೆ.
ಸಿಬಿಐ ಮಾಹಿತಿಯನ್ನು ಕಲೆಹಾಕಿದ್ದು,ಸಿಬಿಐ ಮಾಹಿತಿಯಲ್ಲಿ ಬೆಂಗಳೂರಿನ ಮೌರ್ಯ ಹೊಟೇಲ್ ನಲ್ಲಿ ವಿನಯ್ ಕುಲಕರ್ಣಿ.ರೂಂ ನಂಬರ್ 555 ನ್ನು 8 ಜೂನ್ 2016 ರಿಂದ 20 ಜೂನ್ 2016 ರ ತನಕ ಬುಕ್ ಮಾಡಿದ್ದರು.ತನ್ನ ಶಿಷ್ಯಂದಿರಿಗಾಗಿ ರೂಂ ಬುಕ್ ಮಾಡಿ ಬಿಟ್ಟಿದ್ದ. ಇನ್ನು ಕೊಲೆಯಾದ ನಂತರ ಬಸವರಾಜ ಮುತ್ತಗಿ ಮತ್ತು ಗ್ಯಾಂಗ್ ವಿನಯ್ ಭೇಟಿಯಾಗಿದೆ ಎಂಬುವಂತ ಮಾಹಿತಿಗಳು ಕೂಡ ಲಭ್ಯವಾಗಿದೆ.
ಕೊಲೆ ಕೇಸ್ ನಿಂದ ತಪ್ಪಿಸಿಕೊಳ್ಳಲು ವಿನಯ್ ಕುಲಕರ್ಣಿ ಮೇಗಾ ಪ್ಲಾನ್ ಮಾಡಿದ್ದರು ಎಂಬುವಂತ ಅನುಮಾನ ಸೃಷ್ಟಿಯಾಗಿದ್ದು,ಯೋಗಿಶ್ ಗೌಡ ಮರ್ಡರ್ ಹಿಂದಿನ ದಿನ ಮತ್ತು ಮುಂದಿನ ದಿನ ದೆಹಲಿಯಲ್ಲಿ ಇದ್ದಿದ್ದಾಗಿ ಸಾಕ್ಷಿಗಳ ಸೃಷ್ಟಿಸಿದ್ದು,ಕೊಲೆಗೂ ಮುನ್ನ ಎರಡು ದಿನ ಮತ್ತು ಕೊಲೆಯಾದ ಬಳಿಕ 3 ದಿನದ ಸಾಕ್ಷಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕೊಲೆ ಮುನ್ನ ದೆಹಲಿಗೆ ಹೋಗಿ ಬಂದಿದ್ದರೂ, ಅಲ್ಲೇ ಇದ್ದಿದ್ದಾಗಿ ಸಾಕ್ಷಿ ಸೃಷ್ಟಿಸಿರುವ ಮಾಹಿತಿಯನ್ನು ಸಿಬಿಐ ಕಲೆ ಹಾಕಿದೆ.
12 ಜೂನ್ ಬೆಳಗ್ಗೆ 11:30ಕ್ಕೆ ಹೋಗಿ 13 ಜೂನ್ ಬೆಳಗ್ಗೆ 1:40ಕ್ಕೆ ಬಂದಿದ್ದ ವಿನಯ್ ಮತ್ತೆ 16 ಜೂನ್ ದೆಹಲಿಗೆ ಹೋಗಿ 18 ಜೂನ್ ವಾಪಸ್ಸು ಬಂದಿದ್ದ. ಇನ್ನೂ ಟಿಕೆಟ್ ಬುಕ್ ಮಾಡಿದ್ದಕ್ಕೆ ಸಾಕ್ಷಿಯನ್ನ ಸೃಷ್ಟಿ ಮಾಡಿರೋದು ಪತ್ತೆಯಾಗಿದೆ.
ಈ ಎಲ್ಲಾ ಅಂಶಗಳನ್ನು ಕೋರ್ಟಗೆ ಸಿಬಿಐ ಸಲ್ಲಿಸಿದ್ದು, ಇದರ ಆಧಾರದ ಮೇಲೆ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ಕೇಳಿದ್ದು, ಕೋರ್ಟ್ ಮೂರು ದಿನಗಳ ವಿಚಾರಣೆಗೆ ಅನುಮತಿ ನೀಡಿದೆ.
Kshetra Samachara
07/11/2020 09:16 pm