ಧಾರವಾಡ: ದೇಶದಲ್ಲಿ ಒಂದೇ ಕಾಶ್ಮೀರ್ ಇಲ್ಲ. ಅಂತಹ ಕಾಶ್ಮೀರ್ ಪ್ರತಿ ನಗರ ನಗರದಲ್ಲೂ ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಹಿಂದೂಗಳು ಜಾಗೃತಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಧಾರವಾಡದ ಸಂಗಮ ಚಿತ್ರಮಂದಿರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆಗೆಂದು ಬಂದಿದ್ದ ಅವರು ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು.
ಕಾಶ್ಮೀರ್‌ದಲ್ಲಿ ಮಾತ್ರ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿಲ್ಲ. ಪ್ರತಿ ನಗರಗಳಲ್ಲೂ ಒಂದು ಕೋಮಿನ ಜನಸಂಖ್ಯೆ ಹೆಚ್ಚಾದಂತೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಇಂತಹ ಭಯಾನಕ ಸತ್ಯ ಬಿಚ್ಚಿಟ್ಟು ಜನರನ್ನು ಜಾಗೃತಗೊಳಿಸಿದೆ. ಎಲ್ಲರಿಗೂ ಇದು ಅರ್ಥವಾಗಬೇಕು. ಜಾತಿ, ಮತ, ಪಂಥ, ಪಕ್ಷ ಮರೆತು ಕೇವಲ ಹಿಂದೂವಾಗಿ ಹೋರಾಡಬೇಕು. ಪ್ರತಿಯೊಬ್ಬ ಹಿಂದೂ ಜಾಗೃತರಾಗಿರಬೇಕು ಕರಾಳ ಕೃತ್ಯ ನಿರಂತರವಾಗಿ ಮುಂದುವರೆದಿದೆ ಅದನ್ನು ಕೊನೆಗೊಳಿಸಲು ಸಂಘಟನಾತ್ಮಕ ಹೋರಾಟ ಅವಶ್ಯಕತೆ ಇದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2022 10:17 pm