ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಮಲತಾ ಮೇಡಂ ನಿಮಗಾಗಿ ಕಾಯುತ್ತಿದೆ ಈ ಜೀವ !

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಬ್ಬೊಬ್ಬ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟುಕೊಂಡಿರುತ್ತಾರೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿನಿ, ಮಂಡ್ಯ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರನ್ನು ಆಕಾಶದೆತ್ತರಕ್ಕೆ ಇಷ್ಟಪಡುತ್ತಿದ್ದಾಳೆ. ಒಂದು ಬಾರಿಯಾದರೂ ಅವರನ್ನು ಕಾಣಬೇಕು ಎಂದುಕೊಂಡಿದ್ದಾಳೆ.

ನೀವು ಈಗ ದೃಶ್ಯಗಳಲ್ಲಿ ನೋಡುತ್ತಿರುವ ವಿದ್ಯಾರ್ಥಿನಿ ಹೆಸರು ಸೌಭಾಗ್ಯ ಯಮನೂರ. ಧಾರವಾಡ ಮದಿಹಾಳ ನಿವಾಸಿ. ಈ ವಿದ್ಯಾರ್ಥಿನಿ ನಮ್ಮ ನಿಮ್ಮಂತೆ ಅಲ್ಲ. ಈಕೆ ಹುಟ್ಟುವಾಗಲೇ ವಿಶೇಷ ಚೇತನ ಮಗುವಾಗಿ ಹುಟ್ಟಿದವಳು. ಬುದ್ಧಿ ಈಕೆ ಹಿಡಿತದಲ್ಲಿಲ್ಲ. ವಯಸ್ಸು 18 ವರ್ಷವಾದರೂ ಈಕೆ ಇನ್ನೂ ಚಿಕ್ಕಮಗು. ಹೌದು ಸೌಭಾಗ್ಯ ಓರ್ವ ಬುದ್ಧಿ ಮಾಂದ್ಯ ಮಗು. ಆದರೆ, ತನ್ನ ಜೀವನದಲ್ಲಿ ಈಕೆ ಸುಮಲತಾ ಅಂಬರೀಷ್ ಅವರನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿದ್ದಾಳೆ. ಬುದ್ಧಿಮಾಂದ್ಯ ಶಾಲೆಯಲ್ಲಿ ಓದುತ್ತಿರುವ ಸೌಭಾಗ್ಯಳಿಗೆ ಆಕೆಯ ಹೆಸರಿಗೆ ತಕ್ಕಂತೆ ಯಾವ ಸೌಭಾಗ್ಯ ಇರಬೇಕಿತ್ತೋ ಆ ಸೌಭಾಗ್ಯವೇ ಇಲ್ಲವಾಗಿದೆ.

ಆದರೆ, ಪ್ರತಿದಿನ ಈಕೆ ನ್ಯೂಸ್ ಪೇಪರ್ ನೋಡುತ್ತಾಳೆ. ಯಾಕೆ ಅಂತೀರಾ? ಆ ಪೇಪರ್‌ನಲ್ಲಿ ಸುಮಲತಾ ಹಾಗೂ ಅಂಬರೀಷ್ ಅವರ ಚಿತ್ರ ಬಂದಿರುತ್ತದೆಯೇ ಎಂದು ನೋಡುವುದಕ್ಕೋಸ್ಕರ. ಒಂದು ವೇಳೆ ಫೋಟೋ ಬಂದಿದ್ದರೆ ಅದನ್ನು ಕಟ್ ಮಾಡಿ ಬುಕ್ಕಿಗೆ ಅಂಟಿಸಿಡುತ್ತಾಳೆ. ಹೀಗೆ ಅನೇಕ ಬುಕ್‌ಗಳಲ್ಲಿ ಸುಮಲತಾ ಅಂಬರೀಷ ಅವರ ಚಿತ್ರಗಳನ್ನು ಅಂಟಿಸಿ ಅವರ ಬಗ್ಗೆ ಬರೆದಿದ್ದಾಳೆ. ಸುಮಲತಾ ಅವರ ಬಗ್ಗೆ ಆಕೆಯನ್ನು ಕೇಳಿದರೆ, ನಾನು ಸುಮಲತಾ ಅಂಬರೀಷ್ ಅವರ ಅಭಿಮಾನಿ ಮಾತ್ರ ಎನ್ನುತ್ತಾಳೆ.

ಸೌಭಾಗ್ಯ ಹುಟ್ಟಿನಿಂದಲೇ ಹೀಗೇ ಇದ್ದಾಳೆ. ಅಂಬರೀಷ ನಿಧನದ ಸುದ್ದಿಯನ್ನು ಟಿವಿ ಮಾಧ್ಯಮದಲ್ಲಿ ನೋಡಿ ಅಂಬರೀಷ ಕುಟುಂಬದ ಮೇಲೆ ದೊಡ್ಡ ಅಭಿಮಾನ ಹೊಂದಿದ್ದಾಳೆ. ಸುಮಲತಾ ಅವರನ್ನು ಭೇಟಿ ಮಾಡಲು ಸಾಕಷ್ಟು ಪ್ರಯತ್ನಿಸಿದ್ದೇವೆ ಆದರೆ, ಆಗಿಲ್ಲ ಎಂದು ಸೌಭಾಗ್ಯ ತಂದೆ ನಿಂಗೋಜಿ ತಿಳಿಸಿದರು.

ಸುಮಲತಾ ಅಂಬರೀಷ ಅವರ ಮೇಲೆ ಸಾಕಷ್ಟು ಅಭಿಮಾನ ಹೊಂದಿರುವ ಸೌಭಾಗ್ಯಳನ್ನು ನೋಡಲು ಸುಮಲತಾ ಅವರು ಧಾರವಾಡಕ್ಕೆ ಬರಲೇಬೇಕಿದೆ. ಹೆಚ್ಚಿಗೆ ಮಾತನಾಡಲು ಬರದ ಸೌಭಾಗ್ಯ ಅದ್ಯಾಕೆ ಸುಮಲತಾ ಅವರ ಮೇಲೆ ಅಷ್ಟೊಂದು ಅಭಿಮಾನ ಹೊಂದಿದ್ದಾಳೋ ಗೊತ್ತಿಲ್ಲ. ಆದರೆ, ಬಿಳಿ ಹಾಳೆಯಂತಿರುವ ಈ ಮುಗ್ದ ಮನಸ್ಸಿನ ಸೌಭಾಗ್ಯಳನ್ನು ಸುಮಲತಾ ಅವರು ಭೇಟಿ ಮಾಡಿ ಆಕೆಯ ಆಸೆ ಈಡೇರಿಸಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/03/2022 07:42 pm

Cinque Terre

159.21 K

Cinque Terre

17

ಸಂಬಂಧಿತ ಸುದ್ದಿ