ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾವು ಶಾಸಕರಾಗುವುದಕ್ಕೂ ಮುನ್ನ ಎಷ್ಟು ಆಸ್ತಿ ಹೊಂದಿದ್ದರು ಮತ್ತು ಈಗ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯ ಹರಿಶ್ಚಂದ್ರ ಹಾಗೂ ಪ್ರಾಮಾಣಿಕ ಎಂದು ಹೇಳಿದರೆ ಸಾಲುವುದಿಲ್ಲ. ಎಲ್ಲವೂ ತನಿಖೆಯಲ್ಲಿ ಬಹಿರಂಗವಾಗಲಿ. ಈಗ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳಿದರು.
ಚುನಾವಣೆಗಳು ಬಂದಾಗ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಮಾಡಿದ್ದನ್ನು ಈಗ ನಾವೂ ಮಾಡುತ್ತಿದ್ದೇವೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ತನಿಖಾ ಸಂಸ್ಥೆಗಳು ಯಾವುದೇ ವ್ಯಕ್ತಿಯ ಮನೆ ಮೇಲೆ ದಾಳಿಗೆ ಆರು ತಿಂಗಳಿಂದಲೂ ತಯಾರಿ ಮಾಡಿಕೊಂಡಿರುತ್ತವೆ. ಮಾಹಿತಿ ಕಲೆ ಹಾಕಿರುತ್ತವೆ. ಶಿವಕುಮಾರ್ ಮನೆ ಮೇಲೆ ನಡೆದಿರುವುದು ಹಿಂದಿನ ಪ್ರಕರಣಗಳ ಮುಂದುವರಿದ ಭಾಗವಷ್ಟೆ’ ಎಂದು ಸಮರ್ಥಿಸಿಕೊಂಡರು.
Kshetra Samachara
06/10/2020 04:03 pm