ಧಾರವಾಡ: ನೈಟ್ ಕರ್ಫ್ಯೂ ಸರಿಯಾಗಿತ್ತು. ಕೊರೊನಾ ರೂಪಾಂತರದ ಬಗ್ಗೆ ಸರ್ಕಾರ ಸೀರಿಯಸ್ ಆಗಿದೆ ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರನ್ನು ಇನ್ನುಮುಂದೆ ನಿಯಂತ್ರಣ ಮಾಡೋದು ಸರಿಯಲ್ಲ. ಹಾಗಂತ ಸರ್ಕಾರ ಕೂಡ ತೀರಾ ತಲೆಕೆಡಿಸಿಕೊಂಡು ಬ್ಯುಸಿನೆಸ್ ಗಳಿಗೆ ಹೊಡೆತ ಕೊಡುವುದು ಬೇಡ. ಈಗ ಸದ್ಯಕ್ಕೆ ನಡೆಯುತ್ತಿರುವ ಚಟುವಟಿಕೆಗಳು ಹಾಗೇ ಮುಂದುವರೆದುಕೊಂಡು ಹೋಗಬೇಕು ಎಂದರು.
ಈಗಾಗಲೇ ದೇಶದ ಶೇ.60-70 ರಷ್ಟು ಜನರಿಗೆ ಹರ್ಡ್ ಇಮ್ಯುನಿಟಿ ಬಂದಾಗಿದೆ. ಹಾಗಂತ ಸರ್ಕಾರ ಫ್ರೀಯಾಗಿ ಬಿಟ್ಟಿದೆ ಎಂದು ಜನ ಕೂಡ ಭಾವಿಸಬಾರದು. ಈಗಾಗಲೇ ಕೊರೊನಾದ ರೂಪಾಂತರ ಇಂಗ್ಲೆಂಡ್ ನಿಂದ ಬಂದಿದೆ ಎಂಬ ಮಾತು ಕೇಳಿ ಬರುತ್ತಿವೆ. ಹೀಗಾಗಿ ಸರ್ಕಾರ ಕೆಲ ನಿಯಮಗಳನ್ನು ಜಾರಿಗೆ ತರಬೇಕು. ಸದ್ಯ ನಡೆಯುತ್ತಿರುವ ಬ್ಯುಸಿನಸ್ ಗಳಿಗೆ ಕಡಿವಾಣ ಹಾಕಬಾರದು ಎಂದರು.
Kshetra Samachara
24/12/2020 07:21 pm