ಹುಬ್ಬಳ್ಳಿ - ಇಂದಿನಿಂದ ರಾಜ್ಯದಾದ್ಯಂತ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕರ್ಫ್ಯೂದಿಂದ ತೊಂದರೆ ಆಗುವುದು ಸಹಜ. ಆದರೆ, ಸಾರ್ವಜನಿಕರು ದಿನದ ಕೆಲ ಗಂಟೆ ಕೊರೊನಾಗೆ ಎಕ್ಸ್ ಪೋಸ್ ಆಗಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರಿಗೆ ಹಾಗೂ ಅಗತ್ಯ ಸೇವೆಗಳಿಗೆ ತೊಂದರೆ ಆಗಬಾರದು.
ಅದನ್ನ ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಜನವರಿ 2ರ ವರೆಗೆ ಮಾತ್ರ ಈ ನೈಟ್ ಕರ್ಫ್ಯೂ ಇರಲಿದೆ, ಸಾರ್ವಜನಿಕರು ಸಹಕರಿಸಬೇಕು.
ಈ ಬಗ್ಗೆ ತಜ್ಞರ ಸಲಹೆ ಪಡೆದು ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕೆಲವರು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ
ಆದರೆ ಸರ್ಕಾರ ನೀಡಿದ ಆದೇಶವನ್ನ ಪಾಲಿಸಲೇಬೇಕು. ಕ್ರಿಸ್ ಮಸ್ ಆಚರಣೆಗೆ ಅವಕಾಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಗೃಹ ಸಚಿವ ಬೊಮ್ಮಾಯಿ ಹಿಂದೇಟು ಹಾಕಿದರು.
Kshetra Samachara
24/12/2020 04:09 pm