ಕುಂದಗೋಳ : ನಮ್ಮೂರಿಗೆ ಒಬ್ಬ ನಿಷ್ಠಾವಂತ ರಾಜಕಾರಣಿ ಬೇಕು, ಗ್ರಾಮದ ಅಭಿವೃದ್ಧಿಗೆ ಆತ ದುಡಿಯಬೇಕು, ನಮ್ಮೂರನ್ನು ತಾಲೂಕಿನಲ್ಲೇ ಮೇಲ್ದರ್ಜೆಗೆ ಬೆಳೆಸಬೇಕು ಅಂತಹ ವ್ಯಕ್ತಿ ಈತನೇ ಎಂದು ಗ್ರಾಮಸ್ಥರೇ ಕೈ ಮಾಡಿ ತೋರಿಸಿದ ನೇತಾರನೆ ಈ ಕಲಂದರ್ ಶರೀಪಸಾಬ ಬಾವಿಮನಿ.
ಈ ಹಿಂದೆ ಗ್ರಾಮಸ್ಥರ ಆರ್ಶಿವಾದದ ಫಲವಾಗಿ ಹಿರೇನರ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಇವರ ತಾಯಿ ಹುಸೇನಬಿ ಅವರ ಮಗನಾಗಿ ಗ್ರಾಮದ ಎಳ್ಗೆಗೆ ದುಡಿದ ಕಲಂದರ್ ಸಂಪೂರ್ಣ ಗ್ರಾಮದ ದಿಕ್ಕನ್ನೇ ಅಭಿವೃದ್ಧಿ ಪಥದತ್ತ ಬದಲಿಸಿದ ಯುವ ಉತ್ಸಾಹಿ.
ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿ, ಕೆರೆ ಸುತ್ತ ಬೆಳೆದ ಕಸದ ನಿರ್ವಹಣೆ, ಮನೆ ಮನೆಗೆ ಶೌಚಾಲಯ,
ಅಂಗವಿಕಲರು ವೃದ್ದರಿಗೆ ವೇತನಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿದ ಇವ್ರು ಬೆಣ್ಣೆ ಹಳ್ಳದ ಅಭಿವೃದ್ಧಿಗೆ ಎಮ್.ಎಲ್.ಎ ಎಪಿ ಜೊತೆ ಡಿ.ಕೆ ಶಿವಕುಮಾರ್ ಅವರಿಗೆ ಹಿರೇನರ್ತಿ ಗ್ರಾಮದ ಸಮಸ್ಯೆ ತಿಳಿಸಿ ಅಭಿವೃದ್ಧಿ ಕಾರ್ಯ ಆರಂಭಸಿದರು.
ಅತಿವೃಷ್ಟಿಗೆ ಮನೆ ಕಳೆದು ಕೊಂಡವರಿಗೆ ಪರಿಹಾರ ನೀಡಿ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಕೊಡುಗೈ ದಾನಿಯಾಗಿ, ಶಾಲಾ ಅಭಿವೃದ್ಧಿಗೆ ಜೈ ಎಂದು,
50 ವರ್ಷಗಳಿಂದ ವ್ಯಾಜ್ಯ ಬಗೆಹರಿಯದ ರಸ್ತೆಯನ್ನು ಸುಧಾರಣೆ ಮಾಡಿ ಹಿರಿಯರಿಂದ ಬೇಷ್ ಎನಿಸಿಕೊಂಡ ಕಲಂದರ್ ಈಗಲೂ ಒಬ್ಬ ಸಾಮಾನ್ಯ ಹೋಟೆಲ್ ಮಾಲೀಕನಾಗಿ ನಿತ್ಯ ಕೆಲಸ ಮಾಡುತ್ತಾ ರಾಜಕೀಯವನ್ನು ಪ್ರವೃತ್ತಿ ಮಾಡಿಕೊಂಡವರು.
ಮುದ್ದು ಮಗನಿಗೆಗೆ ತಾಯಿಯ ಹಾರೈಕೆ ಒಂದೇ ಗ್ರಾಮದ ಅಭಿವೃದ್ಧಿಗೆ ಸಾಕಾಗಲ್ಲ, ಇಡೀ ಗ್ರಾಮದ ಅಭಿವೃದ್ಧಿಗೆ ನಿತ್ಯ ಆಳಾಗಿ ದುಡಿಯಬಲ್ಲ ಕಲಂದರ್ ಬಾವಿಮನಿ ಮಾಡಿದ ನೂರಾರು ಕಾರ್ಯ ಅಭಿವೃದ್ಧಿಯ ಬಗ್ಗೆ ಗ್ರಾಮಸ್ಥರು ಅಭಿಪ್ರಾಯ ಕೇಳೋಣ.
ರಾಜಕೀಯವನ್ನು ಪ್ರವೃತ್ತಿಯಾಗಿ ಸ್ವೀಕರಿಸಿದ ಕಲಂದರ್ ತನ್ನ ಹೊಟೇಲ್ ಜೊತೆ ಗ್ರಾಮದಲ್ಲಿರುವ ತುಂಡು ಜಮೀನಿನಲ್ಲೇ ಕೃಷಿ ಚಟುವಟಿಕೆ ಮಾಡುತ್ತಾ
ಹಿರೇನರ್ತಿ ಗ್ರಾಮದ ಯಾವ ಬೀದಿಯಲ್ಲಿ ಸಮಸ್ಯೆ ತಿಳಿದ್ರೇ ತಕ್ಷಣ ಧಾವಿಸುವ ಕಲಂದರ್ ಬಾವಿಮನಿಯನ್ನು ಈ ಬಾರಿ ಗ್ರಾಮಸ್ಥರು ಆಯ್ಕೆ ಮಾಡಿ.
ಈ ಉಂಗುರಕ್ಕೆ ತಮ್ಮ ಅಮೂಲ್ಯ ಮತ ನೀಡಿ ಗ್ರಾಮದ ಏಳ್ಗೆಯ ನೋಡಿ ಖುಷಿ ಪಡಿ.
Kshetra Samachara
24/12/2020 01:51 pm