ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಳಗವಾಡಿ ಅಭಿವೃದ್ಧಿಗೆ ಪಣ ತೊಟ್ಟ ಶ್ರೀಮತಿ ಶೈಲಜಾ ಸೋಮಶೇಖರ ಈರೇಶನವರ

ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮವನ್ನು ನೀವು ಒಮ್ಮೆ ಪ್ರವೇಶ ಮಾಡಿದ್ರೆ ಲೆಕ್ಕಹಾಕಲಾಗದಷ್ಟು ಸಮಸ್ಯೆಗಳು ಎದುರಾಗ್ತವ.

ಈ ಸಮಸ್ಯೆಗಳನ್ನು ಗ್ರಾಮಸ್ಥರಿಂದ ದೂರ ಮಾಡಬೇಕು ಮತ್ತು ಗ್ರಾಮಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಸಾಮಾಜಿಕ ಕಳಕಳಿಯನ್ನು ಹೊತ್ತು ಶ್ರೀಮತಿ ಶೈಲಜಾ ಸೋಮಶೇಖರ ಈರೇಶನವರ ಈ ಬಾರಿ ತಾಲೂಕಿನ ಅಳಗವಾಡಿ ಗ್ರಾ ಪಂ ಚುನಾವಣೆಯಲ್ಲಿ ವಾರ್ಡ್ ನಂಬರ್ 3 ಕ್ರಮ ಸಂಖ್ಯೆ 11 ರಿಂದ ಟ್ರಕ್ ಚಿಹ್ನೆ ಪಡೆದು ಸ್ಪರ್ಧಿಸಿದ್ದಾರೆ.

ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಮೂಲ ಸೌಕರ್ಯಗಳಾದ ಸಾರ್ವಜನಿಕ ಶೌಚಾಲಯ, ಗ್ರಾಮದಲ್ಲಿರುವ ಸ್ವಚ್ಛತೆಯ ಕೊರತೆ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ನಿರ್ಲಕ್ಷತನದ ವಿರುದ್ಧ ಅಭಿವೃದ್ಧಿಗೆ‌ ಧ್ವನಿ ಎತ್ತಿ ಪ್ರಯತ್ನಿಸಿದ್ದಾರೆ‌.

ಗ್ರಾಮಸ್ಥರು ಇಟ್ಟ ನಂಬಿಕೆ ಮತ್ತು ನಿರೀಕ್ಷೆಯನ್ನು ಹುಸಿ ಮಾಡದೇ,ನಂಬಿರುವ ಪ್ರಾಮಾಣಿಕತೆಗೆ ಬದ್ಧರಾಗಿ ಗ್ರಾಮದ‌ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ ಹಗಲಿರುಳು.

ಶ್ರಮಿಸು ವಿಶ್ವಾಸ ದೊಂದಿಗೆ ಶ್ರೀಮತಿ ಶೈಲಜಾ ಸೋಮಶೇಖರ ಈರೇಶನವರ ಚುನಾವಣೆಗೆ ಧುಮುಕಿದ್ದಾರೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಜನಪರ ಸವಲತ್ತುಗಳನ್ನು ಮನೆ‌ಮನೆಗೆ ತರುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ವಾರ್ಡಿನ ಪ್ರಮುಖ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದ್ದು ‌,ಜನರ ಆಶಿರ್ವಾದವೇ ಗೆಲುವಿನ ‌ಶ್ರೀರಕ್ಷೆಯಾಗಿದೆ ಎನ್ನುತ್ತಾರೆ.

Edited By : Manjunath H D
Kshetra Samachara

Kshetra Samachara

23/12/2020 08:27 pm

Cinque Terre

75.29 K

Cinque Terre

2

ಸಂಬಂಧಿತ ಸುದ್ದಿ