ಹುಬ್ಬಳ್ಳಿ:ಅವೈಜ್ಞಾನಿಕ, ಅಪಾಯಕಾರಿ ಬಿ.ಆರ್.ಟಿ.ಎಸ್ ವಿರೋಧಿಸಿ ಆಮ್ ಆದ್ಮಿ ಪಕ್ಷ ಧಾರವಾಡ ಸಮಿತಿ ಹೊಸೂರಿನ ಬಿಆರ್ ಟಿಎಸ್ ಮುಖ್ಯ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಬಿ ಆರ್ ಟಿ ಎಸ್ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ.
ಅವಳಿ ನಗರದ ನಡುವೆ ಕ್ಷಿಪ್ರ ಬಸ್ ಸೇವೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ ಯೋಜನೆಯಾಗಿದ್ದು, ಇದೀಗ ಅದು ಅವೈಜ್ಞಾನಿಕ, ಅಪಾಯಕಾರಿ ವಿನ್ಯಾಸದ ಕಾಮಗಾರಿಯಾಗಿದೆ.
ಸುಮಾರು 1200 ಕೋಟಿ ರೂ. ವೆಚ್ಚದ ಬಿ ಆರ್ ಟಿ ಎಸ್ ಯೋಜನೆ ‘ಮೋಡ ಕಂಡಿದ್ದಕ್ಕೂ ಮಳೆ ಬಂದಿದ್ದಕ್ಕೂ ತಾಳೆಯಾಗದು’ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
22/12/2020 01:30 pm