ಕಲಘಟಗಿ: ತಾಲೂಕಿನಲ್ಲಿನ ಗ್ರಾ ಪಂಗಳಿಗೆ ಇದೇ ದಿ:೨೨ ರಂದು ಚುನಾವಣೆ ನಡೆಯಲಿದ್ದು,ಗ್ರಾ ಪಂ ಚುನಾವಣೆಗೆ ಯುವಕರು,ಹೊಸಬರು ಹೆಚ್ಚಾಗಿ ಸ್ಪರ್ಧಿಸಿದ್ದು,ರಾಜಕೀಯದೆಡೆಗೆ ಒಲವು ತೋರಿರುವುದು ಕಂಡು ಬಂದಿದೆ.
ಗ್ರಾ ಪಂ ಮಿನಿ ಸಮರ ತುರಿಸಿನಿಂದ ಕೂಡಿದ್ದು,ಎಂ ಎಲ್ ಎ ಚುನಾವಣೆಗಿಂತಲು ಕದನಕೂತುಹಲ ಹೆಚ್ಚಿಸಿದೆ.ತಾಮುಂದು,ನಾಮುಂದು ಎಂಬಂತೆ ಯುವಕರು ಚುನಾವಣೆಯ ಕಣದಲ್ಲಿ ಪೈಪೋಟಿಗಿಳಿದಿದ್ದಾರೆ.
ಮಡ್ಕಿಹೊನ್ನಳ್ಳಿ, ಸಂಗಮೇಶ್ವರ,ಗಂಜಿಗಟ್ಟಿ ಯಂತಹ ಗ್ರಾಮ ಪಂಚಾಯಿತಿಗಳಲ್ಲಿ ಯುವಕರ ನಡುವೆ ಜಂಗಿಕುಸ್ತಿ ನಡೆದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಗುರುತಿಸಿಕೊಡಿರುವ ಪಕ್ಷಗಳ ಬೆಂಬಲಿತ ನಡುವೇ ತೀವ್ರ ಸ್ಪರ್ಧೆ ಎರ್ಪಟ್ಟಿದೆ.ಗ್ರಾಮದ ಯುವಕರು ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕೆ ಗುಂಪುಗಳನ್ನು ಕಟ್ಟಿ ಕೊಂಡು ಮುಂದೆ ಇದ್ದಾರೆ.
ಮುಕ್ಕಲ್ ಗ್ರಾಮದಲ್ಲಿ ಅಳಿಯ ಮಾವ ನೇರ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದಾರೆ.ಸಂಗಮೇಶ್ವರ ಗ್ರಾಮದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೆಲ್ಲರು ಹೊಸಬರೇ ಇದ್ದಾರೆ.
ಒಟ್ಟಾರೆ ಈ ಬಾರಿಯ ಗ್ರಾ ಪಂ ಚುನಾವಣೆಗೆ ಯುವಕರ,ಹೊಸ ಮುಖಗಳ ಹಾಗೂ ಮಹಿಳಾ ಮಿಸಲಾತಿಯಿಂದಾಗಿ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿರುವುದು ತಾಲೂಕಿನ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುವುದೇ ಎಂಬುದನ್ನು ಕಾದು ನೋಡ ಬೇಕಿದೆ.
Kshetra Samachara
21/12/2020 01:53 pm