ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೆಡಿಎಸ್,ಬಿಜೆಪಿ ಮೈತ್ರಿ ಬಗ್ಗೆ ಮಾಜಿ ಶಾಸಕ ಕೋನರೆಡ್ಡಿ ಅಸಮಾಧಾನ

ಹುಬ್ಬಳ್ಳಿ: ಒಂದು ವರ್ಷದ ಬಳಿಕ ಸಿದ್ದರಾಮಯ್ಯನವರಿಗೆ ಜ್ಞಾನೋದಯ ಆಗಿದೆ.ಬಹಳ ದೊಡ್ಡ ನಾಯಕರಬಗ್ಗೆ ನಾನೇನೂ ಹೇಳೋದಿಲ್ಲ.ಲವ್ ಮ್ಯಾರೇಜ್ ಆದರೆ ಹೀಗೇ ಆಗೋದು ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ಹಿರಿಯರು ಸೇರಿ ಮದುವೆ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ.ಹೊಸ ಬೀಗತನದ ಬಗ್ಗೆ ಚಿಂತನೆ ನಡೆದಿದೆ‌ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದರು.

ಸಿದ್ದರಾಮಯ್ಯ ಹಾಗೂ ಕುಮಾರಣ್ಣನ ಸಮಸ್ಯೆ ಬಗೆ ಹರಿಯುವ ಲಕ್ಷಣ ಇಲ್ಲ‌ ಎಂದ ಅವರು,ಬಿಜೆಪಿ ಜತೆ ಮೈತ್ರಿ ಬಗ್ಗೆ ವೈಯಕ್ತಿಕ ವಿರೋಧವಿದೆ‌ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ದೇವೇಗೌಡರು, ಕುಮಾರಣ್ಣ ನಿರ್ಧಾರ ತೆಗೆದುಕೊಳ್ಳುತ್ತಾರೆ.2005-06ರಲ್ಲಿ ಮೈತ್ರಿ ಸುಗಮವಾಗಿಯೇ ಇತ್ತು ಎಂದು ಕೊನರೆಡ್ಡಿ ಹೇಳಿದರು.

Edited By :
Kshetra Samachara

Kshetra Samachara

19/12/2020 05:09 pm

Cinque Terre

44.97 K

Cinque Terre

1

ಸಂಬಂಧಿತ ಸುದ್ದಿ