ಕಲಘಟಗಿ: ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಸಾಮಾಜಿಕ ಕಳಕಳಿಯ ಯುವ ಮುಖಂಡ ಶಿವಪ್ಪ ಬಸವಣ್ಣೆಪ್ಪ ಮುಡೆಕ್ಕನವರ ಮಡಕಿಹೊನ್ನಳ್ಳಿ ಗ್ರಾ ಪಂ ಚುನಾವಣೆಯಲ್ಲಿ ಒಂದನೇ ವಾರ್ಡ್ ನಿಂದ ಬ ವರ್ಗದ ಅಭ್ಯರ್ಥಿಯಾಗಿ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿನ್ಹೆ ಪಡೆದು ಸ್ಪರ್ಧಿಸಿದ್ದಾರೆ.
ಐಟಿಐ ಶಿಕ್ಷಣ ಮಾಡಿ ಸ್ವ ಉದ್ಯೋಗ ಮಾಡಿಕೊಂಡಿರುವ ಶ್ರೀ ಶಿವಪ್ಪ ಮುಡೆಕ್ಕನವರ ಸತತ ಎರಡು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು,ಗ್ರಾಮದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಜನರಿಗೆ ಸ್ಪೂರ್ತಿಯಾಗಿದ್ದಾರೆ.ಸಾಮಾಜಿಕ ಕಾರ್ಯಗಳಾದ ಶಾಲಾ ಮಕ್ಕಳಿಗೆ, ಗ್ರಾಮಸ್ಥರಿಗೆ ಕೊವೀಡ್-೧೯ ವೇಳೆ ಮಾಸ್ಕ ವಿತರಣೆ ಮಾಡಿ ಮಾದರಿಯಾಗಿದ್ದಾರೆ ಹಾಗೂ ಗ್ರಾಮದಲ್ಲಿ ಬನ್ನಿ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದಿದ್ದಾರೆ.
ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ,ಮೂಲ ಸೌಕರ್ಯಗಳಾದ ನೀರು,ರಸ್ತೆ,ಗಟಾರ, ಹಾಗೂ ಕೆರೆ ಸ್ವಚ್ಚತೆ ಕುರಿತು ಹಾಗೂ
ಪಂಚಾಯತ ಕಟ್ಟಡ,ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಧ್ವನಿ ಎತ್ತಿ ಪ್ರಯತ್ನಿಸಿದ್ದಾರೆ.
ಗ್ರಾಮಸ್ಥರು ಇಟ್ಟ ನಂಬಿಕೆ ಮತ್ತು ನಿರೀಕ್ಷೆಯನ್ನು ಹುಸಿ ಮಾಡದೇ,ನಂಬಿರುವ ಪ್ರಾಮಾಣಿಕತೆಗೆ ಬದ್ಧರಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ ಹಗಲಿರುಳು ಶ್ರಮಿಸು ವಿಶ್ವಾಸ ದೊಂದಿಗೆ ಶಿವಪ್ಪ ಮುಡೆಕ್ಕನವರ ಚುನಾವಣೆಗೆ ಧುಮುಕಿದ್ದಾರೆ.
ಮಡಕಿಹೊನ್ನಳ್ಳಿ ಗ್ರಾಮ ಪಂಚಾಯತಿಯ 1 ನೇ ವಾರ್ಡ ನಿಂದ ಸ್ಪರ್ಧಿಸಿರುವ ಶ್ರೀ ಶಿವಪ್ಪ ಮುಡೆಕ್ಕನವರ ಬ ವರ್ಗ ದ ಅಭ್ಯರ್ಥಿಯಾಗಿದ್ದಾರೆ.ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಜನಪರ ಸವಲತ್ತುಗಳನ್ನು ಮನೆಮನೆಗೆ ತರುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ವಾರ್ಡಿನ ಪ್ರಮುಖ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದ್ದು ,ಜನರ ಆಶಿರ್ವಾದವೇ ಗೆಲುವಿನ ಶ್ರೀರಕ್ಷೆಯಾಗಿದೆ ಎನ್ನುತ್ತಾರೆ.
Kshetra Samachara
19/12/2020 04:33 pm