ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಡ್ಕಿಹೊನ್ನಳ್ಳಿ ಗ್ರಾ.ಪಂ ಅಭಿವೃದ್ಧಿಗೆ ಕಲ್ಮೇಶ ಗಾಡದ ಪಣ : ಹಿಂದಿನ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ

ಕಲಘಟಗಿ :ಮಡ್ಕಿಹೊನ್ನಳ್ಳಿ ಗ್ರಾಮ ಪಂಚಾಯತಿ ಒಂದನೇ ವಾರ್ಡದಿಂದ ಮರು ಆಯ್ಕೆ ಬಯಸಿರುವ ಗ್ರಾ ಪಂ‌ ಮಾಜಿ ಅಧ್ಯಕ್ಷ ಉತ್ಸಾಹಿ ಶ್ರಿ ಕಲ್ಮೇಶ ಗಾಡದ ಅವರು ಹಿಂದೆ ಮಾಡಿದ ಅಭಿವೃದ್ಧಿ ಕೆಲಸಗಳೇ ಅವರ ಗೆಲುವಿಗೆ ಶ್ರೀರಕ್ಷೆ ಯಾಗಲಿವೆ ಎನ್ನಬಹುದು.

ಗ್ರಾಮದ ಒಂದನೇ ವಾರ್ಡಿನಲ್ಲಿ ಶೇಕಡಾ 80 ರಷ್ಟು ಕಾಂಕ್ರೀಟ್ ರಸ್ತೆ,ಹಳೇ ಪ್ಲಾಟ್ ಎರಡು ಓಣಿಗಳಿಗೆ ಕಾಂಕ್ರೀಟ್ ರಸ್ತೆ, ಸಂಗೆದೇವರಕೊಪ್ಪದ ರಸ್ತೆಯವರೆಗೂ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕೆಲಸಗಳು ಗಮನಾರ್ಹವಾಗಿವೆ.

ಅದೇ ರೀತಿ ಗಾಡದ ಅವರು ಪ್ರತಿನಿಧಿಸುವ ವಾರ್ಡಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಬಡವರಿಗೆ ಐದು ಆಶ್ರಯ ಪ್ಲಾಟ್ ಹಂಚಲಾಗಿದೆ. ಹೊಲಗಳ ರಸ್ತೆಗಳಿಗೆ ಕಡಿ ಮೋರಂ ಹಾಕಿಸಲಾಗಿದೆ,4 ಸಿ ಡಿ ನಿರ್ಮಾಣ ಮಾಡಲಾಗಿದೆ.ಗ್ರಾಮ ವಿಕಾಸ ಯೋಜನೆಯ ಒಳಗೆ ಮಡ್ಕಿಹೊನ್ನಳ್ಳಿ ಮುಖ್ಯ ರಸ್ತೆ ನಿರ್ಮಾಣ,ಕುಡಿಯುವ ನೀರಿನ ಸರಬರಾಜು ಪೈಪ್‍ಲೈನ್ ಮಾಡಿಸಲಾಗಿದೆ.4 ಬೋರ್ ವೇಲ್‌ ಕೊರೆಯಿಸಲಾಗಿದೆ.

ಹಳೇ ಪ್ಲಾಟ್ ಮತ್ತು ಹೊಸ ಪ್ಲಾಟ್ ಹಾಗೂ ಇತರೆ ಓಣಿಗಳಲ್ಲಿ ಹೊಸ ಪೈಪ್‍ಲೈನ್ ಮಾಡಿಸಲಾಗಿದೆ.ಎಸ್ ಸಿ. ಎಸ್ ಟಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಿದ್ದಾರೆ.

ಅರಣ್ಯಿಕರಣ,ಕೃಷಿ ಹೊಂಡ ನಿರ್ಮಾಣ, ಮತ್ತು ಶೌಚಾಲಯ ನಿರ್ಮಾಣ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಜನಾನೂರಾಗಿ ಕೆಲಸ ಮಾಡಿದ್ದಾರೆ‌ ಕಲ್ಮೇಶ ಗಾಡದ.

ಬಣ ದಾರಿ ಕಾಲುವೆ ರೀಪೇರಿ‌ ಹಾಗೂ ದೊಡ್ಡ ಕೆರೆಯಿಂದ ರಸ್ತೆ ನಿರ್ಮಿಸಿ ಅಭಿವೃದ್ಧಿಗೆ ಸದಾ ಸಿದ್ದ ಎಂದು ತೋರಿಸಿದ್ದಾರೆ.

ಕಲ್ಮೇಶ ಗಾಡದ ಅಧ್ಯಕ್ಷ ರಾಗಿ ಆಯ್ಕೆಯಾಗಿ ಹಲವು ಅಭಿವೃದ್ಧಿ ‌ಕೆಲಸ ಮಾಡಿದ್ದಾರೆ ಆದರೆ ಕೋವಿಡ್-19 ಪರಿಣಾಮ ಕೆಲವು ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗದೇ ಉಳಿದಿವೆ ಅವುಗಳನ್ನು ಪೂರ್ಣ ಗೊಳಿಸುವ ಭರವಸೆಯೊಂದಿಗೆ ಮರು ಆಯ್ಕೆ ಬಯಸಿದ್ದಾರೆ ಕಲ್ಮೇಶ ಗಾಡದ.

ಇಷ್ಟೆಲ್ಲ ಅಭಿವೃದ್ದಿ ಕಾರ್ಯ ಮಾಡಿರುವ ಕಲ್ಮೇಶ ಗಾಡದ ಮುಂಬರುವ ದಿನಗಳಲ್ಲಿ ಮಡ್ಕಿಹೊನ್ನಳ್ಳಿಯನ್ನು ಮಾದರಿ ಗ್ರಾಮ ಪಂಚಾಯತಿ ಮಾಡಲು ಪಣ ತೊಟ್ಟಿದ್ದಾರೆ.ಇದರೊಂದಿಗೆ ತಾಲೂಕಿನಲ್ಲಿ ಉತ್ತಮ ಗ್ರಾಮ ಪಂಚಾಯತಿ ಅಂತ ಮಾಡಲು ಹಗಲಿರುಳು ಶ್ರಮಿಸಿವುದಾಗಿ ಭರವಸೆ ನೀಡಿದ್ದಾರೆ.

Edited By :
Kshetra Samachara

Kshetra Samachara

19/12/2020 01:31 pm

Cinque Terre

37.96 K

Cinque Terre

0

ಸಂಬಂಧಿತ ಸುದ್ದಿ