ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ವಿರುದ್ಧ ಎಲ್ಲರೂ ಒಂದಾದರೂ ಸೋಲಿಸಲು ಆಗುತ್ತಿಲ್ಲ

ಧಾರವಾಡ: ಇಂದಿರಾ ಗಾಂಧಿ ಹತ್ಯೆ ನಂತರ ಏಕದ್ರುವಿ ರಾಜಕಾರಣವಿತ್ತು. 2014ರ ನಂತರ ಸಂಪೂರ್ಣ ಸ್ಥಿತಿಗತಿ ಬದಲಾಯಿತು. ನಮ್ಮ ವಿರುದ್ಧ ಎಲ್ಲರು ಒಗ್ಗೂಡಿದರೂ, ಸೋಲಿಸಲು ಆಗುತ್ತಿಲ್ಲ ಎಂದು ಕೇಂದ್ರದ ಗಣಿ-ಭೂವಿಜ್ಞಾನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ತೇಜಸ್ವಿ ನಗರದಲ್ಲಿ ಧಾರವಾಡ-71ರ ವಿವಿಧ ಮಂಡಳದ ಹಾಗೂ ಪ್ರಕೋಷ್ಠದ ಮುಖಂಡರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಹಾಗೂ 2014ರ ನಂತರ ಬದಲಾದ ರಾಜಕಾರಣ: ಭಾಜಪ ಮತ್ತು ನಮ್ಮ ಜವಾಬ್ದಾರಿ ಬಗ್ಗೆ ಮಾತನಾಡಿದರು.

ದೇಶದಲ್ಲಿ ನಡೆದ 58 ಚುನಾವಣೆಯಲ್ಲಿ 42 ಚುನಾವಣೆ ಬಿಜೆಪಿ ಗೆಲವು ಸಾಧಿಸಿದೆ. ಇದೀಗ ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗುವ ಸ್ಥಿತಿ ಇದೆ. ಬಿಹಾರ ಚುನಾವಣೆ ಐತಿಹಾಸಿಕ ಗೆಲವು.

ಕಾಂಗ್ರೆಸ್ ಎದುರಿಸಲು ಎಲ್ಲರೂ ಒಗ್ಗೂಡುತ್ತಿದ್ದರು. ಇಂದಿರಾ ಹತ್ಯೆ ನಂತರ ಇಡೀ ದೇಶದಲ್ಲಿ ಎರಡು ಲೋಕಸಭಾ ಹಾಗೂ ವಿಧಾನ ಸಭಾ ಸದಸ್ಯರಿದ್ದರು.

2014-282, 2019-303 ಸ್ಥಾನ ಗೆದ್ದಿದೆ. ಶೇ.6ರಷ್ಟು ಮತದಾನ ಹೆಚ್ಚಳವಾಗಿದೆ. 2014ರಿಂದ 2019ರವರೆಗೆ ಸಂಪೂರ್ಣ ಬಿಜೆಪಿ ಆಡಳಿತ. ಮೇಲ್ವರ್ಗದ, ನಗರವಾಸಿಗಳ ಪಾರ್ಟಿ ಎಂಬ ಆರೋಪ ಇತ್ತು. ಇದೀಗ ಸರ್ವ ವ್ಯಾಪ್ತಿಯಲ್ಲಿ ಬಿಜೆಪಿ ಅಕ್ಷರಶಃ ಮನೆ ಮಾಡಿರುವುದು ಅಭಿಮಾನ ಮೂಡಿಸಿದೆ ಎಂದರು.

ಮೋದಿ ಪರಿಶ್ರಮದ ಫಲವಾಗಿ ಕೃಷಿ, ಆರ್ಥಿಕತೆ, ಸೇನೆ, ರಕ್ಷಣೆ ಹಾಗೂ ಸರ್ವರಂಗದಲ್ಲೂ ಆಮೂಲಾಗ್ರ ಬದಲಾವಣೆ ಬಂದಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಜಾಗತಿಕವಾಗಿ ಮೋದಿ ಹೆಸರುವಾಸಿ ಆಗಿದ್ದಾರೆ ಎಂದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಬಿಜೆಪಿ ಶಿಸ್ತಿನ ಶಿಪಾಯಿಗಳನ್ನು ನಿರ್ಮಿಸುವ ಪಕ್ಷ. ತತ್ವ-ಸಿದ್ಧಾಂತ, ನೈತಿಕತೆ, ಜವಾಬ್ದಾರಿ ಬೆಳೆಸುವ ಪಕ್ಷ.

ಈ ಕಾರಣಕ್ಕೆ ಬಿಜೆಪಿ ಬುನಾದಿ ಗಟ್ಟಿಯಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉತ್ತಮ ಅವಕಾಶಗಳಿವೆ. ಎರಡು ದಿನದ ಪ್ರಶಿಕ್ಷಣ ವರ್ಗ ಸದ್ಭಳಸಿಕೊಳ್ಳಲು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಬಿಜೆಪಿ ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ದುಡಿಯುವ ಜನರು. ನಮ್ಮ ಪಕ್ಷದ ಕಾರ್ಯಕರ್ತರು ಧ್ಯೇಯ, ತತ್ವ-ಸಿದ್ಧಾಂತ, ಆದರ್ಶ ಒಪ್ಪಿ-ಅಪ್ಪಿ ಕೆಲಸ ಮಾಡುತ್ತಾರೆ ಎಂದರು.

Edited By : Nirmala Aralikatti
Kshetra Samachara

Kshetra Samachara

18/12/2020 07:39 pm

Cinque Terre

24.32 K

Cinque Terre

4

ಸಂಬಂಧಿತ ಸುದ್ದಿ