ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 'ಚಂದು ಮಾಮಾ' ಶಕುನಿ ಪಾತ್ರ ನಿಭಾಯಿಸಿದ

ಧಾರವಾಡ: ನನ್ನ ಹತ್ಯೆಗೂ ಸಂಚ ರೂಪಿಸಲಾಗಿತ್ತು ಎಂಬ ವಿಷಯ ಕೇಳಿ ನಾನು ದಿಗ್ಬ್ರಾಂತನಾಗಿದ್ದೇನೆ. ಅದನ್ನು ಇನ್ನೂ ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ.

ಈ ವಿಷಯದಲ್ಲಿ ಚಂದ್ರಶೇಖರ ಇಂಡಿ ಶಕುನಿ ಪಾತ್ರ ಮಾಡಿದರು ಎಂದು ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹೇಳಿದರು.

ಧಾರವಾಡದ ಉಪನಗರ ಠಾಣೆಯಲ್ಲಿ ಸಿಬಿಐ ನಡೆಸುತ್ತಿರುವ ವಿಚಾರಣೆಗೆ ಬಂದ ವೇಳೆ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಚಂದ್ರಶೇಖರ ಅವರನ್ನು ನಾವು ಮಾಮಾ ಎಂದೇ ಕರೆಯುತ್ತೇವೆ. ಕೂಡಿ ಕುಳಿತು ಊಟ ಮಾಡಿದ್ದೇವೆ. ಅದೇ ಊಟದಲ್ಲಿ ವಿಷ ಬೆರೆಸಿದ್ದರೆ ಸಂತೋಷವಾಗಿ ತಿನ್ನುತ್ತಿದ್ದೆವು. ಈ ವಿಷಯದಲ್ಲಿ ಚಂದು ಮಾಮಾ ಶಕುನಿ ಪಾತ್ರ ಮಾಡಿದರು ಎಂದರು.

ಕೆಲವರಿಗೆ ಕೆಲವು ವೀಕನೆಸ್ ಇರುತ್ತವೆ. ನಾವು ಭಾವನೆಗಳಲ್ಲಿ ಬದುಕುವವರು, ಕೆಲವರಿಗೆ ಛಾಡಿ ಕೇಳುವ ವೀಕ್​ನೆಸ್​ ಇರುತ್ತದೆ. ಆ ಛಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು.

ಚಂದ್ರಶೇಖರ ಇಂಡಿ ಎಂಬ ಕ್ಯಾರೆಕ್ಟರ್ ಎಂಟ್ರಿ ಆಗಿ ಎಲ್ಲರ ಬದುಕೇ ಹಾಳು ಮಾಡಿದೆ.‌ ಈ ಸಂಬಂಧ ದೂರು ಕೊಡುವ ಬಗ್ಗೆ ನಮ್ಮ ವಕೀಲರ ಜೊತೆ ಮಾತನಾಡುವೆ ಎಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

16/12/2020 03:51 pm

Cinque Terre

62.26 K

Cinque Terre

0

ಸಂಬಂಧಿತ ಸುದ್ದಿ